ಹೊಸ ಮಾರ್ಗಸೂಚಿಗಳಿಂದ ಚೈನ್ ಲಿಂಕ್ ಕಟ್ ಮಾಡಬಹುದು: ಸಚಿವ ಸುಧಾಕರ್ ವಿಶ್ವಾಸ

ಹೊಸ ಮಾರ್ಗಸೂಚಿಗಳಿಂದ ಚೈನ್ ಲಿಂಕ್ ಕಟ್ ಮಾಡಬಹುದು: ಸಚಿವ ಸುಧಾಕರ್ ವಿಶ್ವಾಸ

ಬೆಂಗಳೂರು,ಏ.21 ಹೊಸ ಮಾರ್ಗಸೂಚಿಗಳಿಂದ ಚೈನ್ ಲಿಂಕ್ ಕಟ್ ಮಾಡಬಹುದಾಗಿದ್ದು,ಮೂರ್ನಾಲ್ಕು ದಿನಗಳಲ್ಲಿ ಸೋಂಕಿನ ಪ್ರಮಾಣ ಕಡಿಮೆ ಆಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್,ಜನರು ಭಯಪಡುವ ಅಗತ್ಯ ಇಲ್ಲ.ಪ್ರತಿಯೊಬ್ಬರಿಗೂ ಆಸ್ಪತ್ರೆ ದಾಖಲಾಗುವ ಅವಶ್ಯಕತೆ ಇಲ್ಲ.ಯಾರು ಆಸ್ಪತ್ರೆಗೆ ದಾಖಲಾಗಬೇಕು,ಯಾರು ಆಗಬಾರದೆಂಬ ಬಗ್ಗೆ ಸಂಜೆ ವಿವರವಾಗಿ ಮಾಹಿತಿ ನೀಡುವುದಾಗಿ ಹೇಳಿದರು.

ಸಿಎಂ ಸಭೆ ನಡೆಸಿ ವೈಜ್ಞಾನಿಕವಾಗಿ ಸೋಂಕು ಕಡಿಮೆ ಆಗಲು ಯಾವುದೆಲ್ಲ ಕ್ರಮ ತೆಗೆದುಕೊಳ್ಳಬೇಕೋ ಅದೆಲ್ಲವನ್ನು ತೆಗೆದುಕೊಂಡಿದ್ದಾರೆ.ಜನರು ಇದನ್ನು ಅರ್ಥಮಾಡಿಕೊಂಡು ಅದರಂತೆ ನಡೆದುಕೊಳ್ಳಬೇಕು.ಆಕ್ಸಿಜನ್, ಸ್ಟಿರಾಯಿಡ್, ರೆಮೆಡಿಸಿವರ್ ಎಲ್ಲಾ ಔಷಧಿಗಳ ಲಭ್ಯತೆಯನ್ನೂ ಹೆಚ್ಚು ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ.ವೈದ್ಯರಿಗೂ ಹೆಚ್ಚುವರಿ ಜವಾಬ್ದಾರಿ ಜೊತೆ ಹೆಚ್ಚುವರಿ ವೇತನ ನೀಡಲು ಚಿಂತನೆ ನಡೆಸಲಾಗಿದೆ.ನಾನ್ ಕೋವಿಡ್ ರೋಗಿಗಳನ್ನು ಆದ್ಯತೆ ಮೇರೆಗೆ ಡಿಸ್ ಚಾರ್ಜ್ ಮಾಡಲು ಸೂಚಿಸಿದ್ದೇವೆ.ಸಿಎಂ ಎರಡನೇ ಬಾರಿಗೆ ಕೋವಿಡ್ ಗೆ ಒಳಗಾಗಿದ್ದರೂ ಆಸ್ಪತ್ರೆ ಯಿಂದಲೇ ಕೆಲವು ಸೂಚನೆಗಳನ್ನು ನೀಡುತ್ತಿದ್ದಾರೆ.ಕೆಲವು ಆಸ್ಪತ್ರೆ ಗಳ ಮುಖ್ಯಸ್ಥರ ಜೊತೆ ಸಿಎಂ ಸಂಪರ್ಕದಲ್ಲಿ ಇದ್ದಾರೆ.ವಿರೋಧ ಪಕ್ಷಗಳ ಮುಖ್ಯಸ್ಥರು ಸರ್ಕಾರಕ್ಕೆ ಸೂಕ್ತ ಸಲಹೆಗಳನ್ನು ನೀಡಿದ್ದಾರೆ ಎಂದು ಸುಧಾಕರ್ ಹೇಳಿದರು.

ಐದು ಸೋಂಕು ಹೆಚ್ಚಿರುವ ಜಿಲ್ಲೆಗಳ ಡಿಸಿಗಳ ಜೊತೆ ಕಂದಾಯ ಸಚಿವರು, ಗೃಹ ಸಚಿವರ ಜೊತೆ ಸಭೆ ಇಂದು ಸಭೆ ನಡೆಸಲಾಗುವುದು.ನಾಳೆ ಇಡೀ ದಿನ ಮೈಸೂರಿನಲ್ಲಿರಲಿದ್ದು, ಮುಂದಿನ ದಿನಗಳಲ್ಲಿ ಸೋಂಕು ಹೆಚ್ಚಾಗಿರುವ ಏಳು ಜಿಲ್ಲೆಗಳಿಗೂ ಭೇಟಿ ನೀಡುವುದಾಗಿ ಹೇಳಿದರು.

, ,

Leave a Reply

Your email address will not be published. Required fields are marked *