ಆಗಸ್ಟ್ 28, 29ಕ್ಕೆ ಸಿಇಟಿ ಪರೀಕ್ಷೆ, ವೃತಿಪರ ಕೋರ್ಸ್ ಗಳಿಗೆ ಸಿಇಟಿ ಅಂಕಗಳ ಪರಿಗಣನೆ; ಡಿಸಿಎಂ ಅಶ್ವತ್ಥ ನಾರಾಯಣ್

ಆಗಸ್ಟ್ 28, 29ಕ್ಕೆ ಸಿಇಟಿ ಪರೀಕ್ಷೆ, ವೃತಿಪರ ಕೋರ್ಸ್ ಗಳಿಗೆ ಸಿಇಟಿ ಅಂಕಗಳ ಪರಿಗಣನೆ; ಡಿಸಿಎಂ ಅಶ್ವತ್ಥ ನಾರಾಯಣ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಉಲ್ಭಣದಿಂದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಿ, ಪ್ರಥಮ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಅಂಕಗಳ ಆಧಾರದ ಮೇಲೆ ಫಲಿತಾಂಶ ಪ್ರಕಟಿಸುವಂತ ನಿರ್ಧಾರವನ್ನು ಸರ್ಕಾರ ಕೈಗೊಂಡಿತ್ತು. ಇದರ ಬೆನ್ನಲ್ಲೇ, ವೃತ್ತಿಪರ ಕೋರ್ಸ್ ಗಳ ಸಿಇಟಿಗೆ ಪರೀಕ್ಷೆಯನ್ನು ನಿಗದಿಯಂತೆ ಆಗಸ್ಟ್ 28, 29ರಂದು ನಡೆಸಲು ನಿರ್ಧರಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಡಿಸಿಎಂ ಅಶ್ವತ್ಥ ನಾರಾಯಣ್ ಹೇಳಿದ್ದಾರೆ.

ಸಭೆ ಮುಗಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ವೃತ್ತಿ ಪರ ಕೋರ್ಸ್ ಗಳಿಗೆ ದ್ವಿತೀಯ ಪಿಯುಸಿ ಅಂಕಗಳನ್ನು ಈ ಬಾರಿ ಪರಿಗಣಿಸದಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದರು. ಈ ನಿಟ್ಟಿನಲ್ಲಿ ಇನ್ನು ಚಿಂತನೆ ನೆಡೆದಿದೆ.  ಇಂದು ತಜ್ಞರ ಸಭೆಯನ್ನು ನಡೆಸಲಾಗಿದೆ. ವೃತ್ತಿಪರ ಕೋರ್ಸ್ ಗಳಿಗೆ ಸಿಇಟಿ ಅಂಕಗಳ ಪರಿಗಣಿಸುವಂತೆ ಸೂಚಿಸಿದ್ದಾರೆ, ಸಿಇಟಿಯಲ್ಲಿ ನೀಟ್ ರೀತಿ ಮಿನಿಮಮ್ ಅಂಕ ಬಗ್ಗೆ ಚರ್ಚಿಸಿ ನಿರ್ಧಾರ ಮಾಡಲಾಗುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ವೃತ್ತಿಪರ ಕೋರ್ಸ್ ಗಳಿಗೆ ನೊಂದಣಿ ಕಾರ್ಯ ಜೂನ್.15ರಿಂದ ಆರಂಭವಾಗಲಿದೆ. ಮೊದಲು ಹೇಗೆ ಪರೀಕ್ಷೆ ನಡೆಯುತ್ತಿತ್ತೊ ಹಾಗೆ ನಡೆಯುತ್ತೆ,ಪ್ರತಿ ವಿಷಯಕ್ಕೆ 60ಅಂಕಗಳ ಪ್ರಶ್ನೆಗಳು ಇರುತ್ತವೆ, ಮೊದಲ ದಿನ ಗಣಿತ, ಜೀವಶಾಸ್ತ್ರ ಪರೀಕ್ಷೆ ನಡೆಸಲಾಗುತ್ತದೆ. 2 ನೇ ದಿನ ರಾಸಾಯನ ಶಾಸ್ತ್ರ ಭೌತ ಶಾಸ್ತ್ರ ಪರೀಕ್ಷೆ ನಡೆಯಲಿದೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಅಂಕ ಪರಿಗಣನೆ ಮಾಡಲಾಗುತ್ತದೆ ಎಂಬುದಾಗಿ ತಿಳಿಸಿದರು.

, ,

Leave a Reply

Your email address will not be published. Required fields are marked *