ಕನ್ನಡದಲ್ಲೇ ಸಂಕ್ರಾಂತಿ ಶುಭಾಶಯ ಕೋರಿದ ಅಮಿತ್ ಶಾ

ಕನ್ನಡದಲ್ಲೇ ಸಂಕ್ರಾಂತಿ ಶುಭಾಶಯ ಕೋರಿದ ಅಮಿತ್ ಶಾ
ಬೆಂಗಳೂರು, ಜ 14 ರಾಜ್ಯ ಪ್ರವಾಸ ಕೈಗೊಳ್ಳಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದ ಕನ್ನಡಿಗರಿಗೆ, ಕನ್ನಡದಲ್ಲಿಯೇ ಸಂಕ್ರಾಂತಿ ಶುಭಾಶಯ ಕೋರಿದ್ದಾರೆ.

ಇಂದು ಬೆಳಗ್ಗೆಯೇ ಕನ್ನಡದಲ್ಲೇ ಅಮಿತ್ ಶಾ ಟ್ವೀಟ್ ಮಾಡಿ ಶುಭಾಶಯ ಕೋರಿದ್ದಾರೆ. ರಾಜ್ಯದ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಈ ಪವಿತ್ರ ಹಬ್ಬ ಎಲ್ಲರ ಜೀವನದಲ್ಲೂ ಸುಖ, ಸಮೃದ್ಧಿ ಮತ್ತು ಆರೋಗ್ಯಕರುಣಿಸಲಿ ಎಂದೂ ಬರೆದಿದ್ದಾರೆ.

ಇನ್ನು ಅಮಿತ್ ಶಾ ಇದೇ 16 ಮತ್ತು 17 ರಂದು ಎರಡು ದಿನಗಳ ಕಾಲ ರಾಜ್ಯ ಪ್ರವಾಸಕ್ಕೆ ಆಗಮಿಸಲಿದ್ದು, ಬೆಂಗಳೂರು, ಬೆಳಗಾವಿ, ಶಿವಮೊಗ್ಗ, ಬಾಗಲಕೋಟೆ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *