ಬೆಂಗಳೂರು: ಫೆಬ್ರವರಿ 09 (ಉದಯಕಾಲ) ಕರ್ನಾಟಕವನ್ನು ಜೀತ ವಿಮುಕ್ತಿಗೊಳಿಸಲು, ಸಂಕಷ್ಟದಲ್ಲಿರುವ ಸಮುದಾಯಗಳ ಜನರಿಗೆ ನ್ಯಾಯವನ್ನು ಒದಗಿಸಲು ನನ್ನ ಸೇವೆಯನ್ನು ಮುಡುಪಾಗಿಡುತ್ತೇನೆ. ಈ ಮೂಲಕ ಸಮಾನತೆಯನ್ನು ಸಾಧಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ಈ ಮೂಲಕ ಪ್ರತಿಜ್ಞೆ ಮಾಡುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಮಾಣ ಸ್ವೀಕರಿಸಿದರು.
ಇಂದು ಬೆಳಿಗ್ಗೆ ವಿಧಾನಸೌಧದ ಮೂರನೇ ಮಹಡಿಯ ಸಚಿವರ ಕೊಠಡಿಯಲ್ಲಿ ಸಚಿವರ ಜೊತೆ ಇಲಾಖೆ ಅಧಿಕಾರಿಗಳು ಪ್ತಮಾಣ ವಚನ ಸ್ವೀಕಾರ ಮಾಡಿದರು.
ಕರ್ನಾಟಕ ರಾಜ್ಯದಲಿ ಪ್ರತಿ ವರ್ಷ ಫೆಬ್ರವರಿ 9ನೇ ತಾರೀಖನ್ನು ಜೀತ ಪದ್ದತಿ(ರದ್ದತಿ) ದಿನಾಚರಣೆ ಎಂದು ಘೋಷಿಸಿ ಅಧಿಸೂಚನೆ ಹೊರಡಿಸಲಾಗಿದೆ. ಸದರಿ ದಿನಾಂಕದಂದು ಸರ್ಕಾರಿ ಕಚೇರಿಗಳಲ್ಲಿ ಜೀತ ಪದ್ಧತಿ ರದ್ದತಿಯ ಕುರಿತಂತೆ ಪ್ರತಿಜ್ಞಾ ವಿಧಿ ಕಾರ್ಯಕ್ರಮ ನಡೆಸಲಾಗುತ್ತದೆ.
ಜೀತವಿಮುಕ್ತರಿಗೆ ಇರುವ ಹಕ್ಕುಗಳು ಮತ್ತು ಪುನರ್ವಸತಿ ಬಗ್ಗೆ ತಿಳುವಳಿಕೆ ನೀಡುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಲಾಗಿರುತ್ತದೆ.