ಸಂಕ್ರಾಂತಿಯಲ್ಲಿ ಸಿ.ಡಿ.ಸಿಡಿಯಬಹುದು: ಎಚ್.ವಿಶ್ವನಾಥ್


ಬೆಂಗಳೂರು, ಜ.13  ಸಂಕ್ರಾಂತಿ ಬಳಿಕ ಸಿ.ಡಿ. ಸಿಡಿಯಬಹುದು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸೂಚ್ಯವಾಗಿ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಸಿ.ಡಿ.ತೋರಿಸಿ ಕೆಲವರು ಸಚಿವ ಸ್ಥಾನ ಪಡೆದಿದ್ದಾರೆ. ನಮ್ಮ ಭಿಕ್ಷೆಯಿಂದಲೇ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ನಲ್ಲಿ ನಾಯಕತ್ವದ ಬಗ್ಗೆ ಅಸಮಾಧಾನಗೊಂಡು ಬಂಡೆದ್ದು ಬಂದ ಎಲ್ಲ 17 ಮಂದಿಗೂ ಸಚಿವ ಸ್ಥಾನ ನೀಡಬೇಕಾಗಿತ್ತು.. ನಾವು ಬಂಡೇಳದಿದ್ದರೆ, ಬಿಜೆಪಿ ಸರ್ಕಾರ ರಚನೆ ಆಗಲು ಅವಕಾಶವೇ ಇರಲಿಲ್ಲ ಹೇಳಿದರು.
‘ಸೈನಿಕನಿಗೆ ಸಚಿವ ಸ್ಥಾನ ಕೊಡುವ ಅಗತ್ಯ ಏನಿತ್ತು. ಆತನೊಬ್ಬ ಫ್ರಾಡ್‌, ರಿಯಲ್‌ ಎಸ್ಟೇಟ್‌ನಲ್ಲಿ ಸಾವಿರಾರು ಜನರಿಗೆ ವಂಚಿಸಿದ್ದು, ಹಲವು ಪ್ರಕರಣ ಆತನ ಮೇಲಿದೆ. ಅಂತಹ ವ್ಯಕ್ತಿಗೆ ಕರೆದು ಮಂತ್ರಿ ಸ್ಥಾನ ಕೊಟ್ಟಿದ್ದಾರೆ ಎಂದರೆ ಬಲವಾದ ಕಾರಣ ಏನೋ ಇರಲೇಬೇಕು. ಬ್ಲಾಕ್‌ ಮೇಲ್‌ ಏನಾದರೂ ಇರಬಹುದು, ಸಂಕ್ರಾಂತಿಯಲ್ಲಿ ಆ ಸಿಡಿ ಸಿಡಿಯಬಹುದು ಎಂದು ವಿಶ್ವನಾಥ್‌ ಭವಿಷ್ಯ ನುಡಿದರು.
ದಲಿತ ವರ್ಗಕ್ಕೆ ಸೇರಿದ ಎಚ್‌.ನಾಗೇಶ್ ಅವರನ್ನು ಕೈಬಿಡುವ ಅಗತ್ಯ ಏನಿತ್ತು. ಅವರು ಕೂಡ ಸರ್ಕಾರ ರಚನೆಯಲ್ಲಿ ಪಾತ್ರ ವಹಿಸಿದ್ದರು. ತಮ್ಮ ಸಚಿವ ಸ್ಥಾನ ತ್ಯಜಿಸಿ ಬಂದಿದ್ದರು. ಈಗ ಅವರಿಂದ ರಾಜೀನಾಮೆ ಕೇಳುತ್ತಿರುವುದು ಅನ್ಯಾಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *