ಕೊರೊನಾ ಮಾರ್ಗಸೂಚಿ ಪಾಲಿಸದ ಬಿಜೆಪಿಗರ ಮೇಲೆ ಕೇಸ್?

ಬೆಂಗಳೂರು : ಜನೆವರಿ 18 (ಉದಯಕಾಲ) ಕೊರೊನಾ ಮಾರ್ಗಸೂಚಿ ಪಾಲನೆ‌ ಮಾಡದ ಬಿಜೆಪಿ ನಾಯಕರ ಮೇಲೆ ಕೇಸ್ ಹಾಕುವಂತೆ ಡಿಕೆಶಿ ಪ್ಲಾನ್ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ರಾಜಧಾನಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ, ಡಿ.ಕೆ.ಶಿವಕುಮಾರ್, “ಸಿಎಂ‌ ಮನೆ ಮುಂದೆ ಪ್ರತಿಭಟನೆ ಮಾಡಲು ಕಾಂಗ್ರೆಸ್ ತಿರ್ಮಾನ ಕೈಗೊಂಡಿದೆ.  ನಾವು ಸಿಎಂ‌ ಭೇಟಿ ಮಾಡಲು ಹೋಗೋದು ನೆಂಟಸ್ಥಿಕೆ‌ ಮಾಡಲು ಅಲ್ಲ. ನಾವೇನು ಮಾಡ್ತೇವೆ ಅನ್ನೋದನ್ನು ನೀವು ನೋಡ್ತಾ ಇರಿ. I am waiting for Siddaramaiah. ಸಿದ್ದರಾಮಯ್ಯ ಅವರು ಮೈಸೂರಿಗೆ ಹೋಗಿದ್ದಾರೆ. ಅವರು ಬರಲಿ – ಎನ್ ಮಾಡಬೇಕು ಅಲ್ಲಿಗೆ ಹೋಗಿ ಮಾಡ್ತೇವೆ. ನಾವು ಸುಮ್ಮನೆ ಕುಳಿತುಕೊಳ್ಳುವವರಲ್ಲ. ಈಗಾಗಲೇ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ. ಈಗ ಸಹಿ ಹಾಕಿದ್ದೇನೆ. ನೀವು ನೋಡ್ತಾ ಇರಿ ಎಂದು ಡಿಕೆಶಿ ಕೌತುಕ ಹುಟ್ಟು ಹಾಕಿದರು. ಆದರೆ, ಕೊರೊನಾ ಗೈಡ್ ಲೈನ್ಸ್ ಪಾಲಿಸದ ಬಿಜೆಪಿ ನಾಯಕರ ಮೇಲೆ ಕೇಸ್ ಹಾಕುವ ಬಗ್ಗೆ ಯಾವುದೇ ಮಾಹಿತಿಯನ್ನು ಡಿಕೆಶಿ ಬಿಟ್ಟುಕೊಟ್ಟಿಲ್ಲ.

“ಅಶೋಕನಷ್ಟು ಬುದ್ಧಿವಂತರಲ್ಲ”
ಈ ಮಧ್ಯೆ, ಸಚಿವ ಆರ್ ಅಶೋಕ ವಿರುದ್ಧ ವಾಗ್ದಾಳಿ ನಡೆಸಿದ ಡಿಕೆಶಿ, “ನಾನು ಅವರಷ್ಟು ಅತಿ ಬುದ್ದಿವಂತ ಅಲ್ಲ. ಅವರು ಕೊರೊನಾ ರೆಸ್ಟ್ ಮಾಡ್ತಾ ಇದ್ರು. ಈಗ ಪಾಪ ಮಾತಾಡ್ತಾ ಇದ್ದಾರೆ. ಇನ್ನಷ್ಟು ರೆಸ್ಟ್ ಮಾಡಲಿ. ಮೇಕೆದಾಟು ಯೋಜನೆ ಕುಡಿಯುವ ನೀರಿಗಾಗಿ. ಕನಕಪುರದ ಒಂದೇ ಒಂದು ಎಕರೆಗೆ ಬಳಕೆ ಆಗಲ್ಲ. ಬೆಂಗಳೂರಿನ ‌ಕುಡಿಯುವ ನೀರಿಗಾಗಿ ಯೋಜನೆ ಅದು. ಹಾಸನ ತುಮಕೂರು, ಮೈಸೂರು ರೈತರಿಗೆ ಅನುಕೂಲ ಆಗಲಿದೆ. ಮೇಕೆದಾಟು ಪಾದಯಾತ್ರೆಯಿಂದ‌ ಕೋರ್ಟ್ ನಲ್ಲಿ ಹಿನ್ನಡೆ ಆಗಲಿದೆ ಎಂಬ ಆರ್ ಅಶೋಕ ಹೇಳಿಕೆಗೆ ಡಿಕೆಶಿ ಟಾಂಗ್ ನೀಡಿದರು.

“ಅಫೆನ್ಸ್ಸ ಇಸ್ ದ ಬೆಸ್ಟ್ ಡಿಫೆನಸ್ಸ್”
ಅಫೆನ್ಸ್ಸ ಇಸ್ ದ ಬೆಸ್ಟ್ ಡಿಫೆನಸ್ಸ್ ಎಂಬ ಡಾ ಅಶ್ವಥ್ ನಾರಾಯಣ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಡಿ ಕೆ ಶಿವಕುಮಾರ್, ಮೆಂಟಲ್ ಬ್ಯಾಲೆನ್ಸ್ ಕಳೆದುಕೊಂಡವರ ಬಗ್ಗೆ ಮಾತನಾಡುವುದು ಬೇಡ ಎಂದ ಡಿ ಕೆ ಶಿವಕುಮಾರ್ ಹೇಳಿದರು.

,

Leave a Reply

Your email address will not be published. Required fields are marked *