ಟ್ರಂಪ್ ಬೆಂಗಲಿರ ಪುಂಡಾಟ, ಕ್ಯಾಪಿಟಲ್ ಪೊಲೀಸ್ ಮುಖ್ಯಸ್ಥ ರಾಜೀನಾಮೆ
ವಾಷಿಂಗ್ಟನ್, ಜನವರಿ 8 ಅಮೆರಿಕದ ರಾಜಧಾನಿ ಕ್ಯಾಪಿಟಲ್ ಹಿಲ್ ನಲ್ಲಿ
ಹಾಲಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಬೆಂಬಲಿಗರ ಹಿಂಸೆ, ಪುಂಡಾಟದ ನಂತರ
ಕ್ಯಾಪಿಟಲ್ ಪೊಲೀಸ್ ಮುಖ್ಯಸ್ಥ ಸ್ಟೀವನ್ ಸುಂಡ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಕ್ಯಾಪಿಟಲ್ ಕಟ್ಟಡಕ್ಕೆ ಟ್ರಂಪ್ ಪರ ಬೆಂಬಲಿಗರು ಮುತ್ತಿಗೆ ಹಾಕಿದ ಒಂದು ದಿನದ ನಂತರ.
ಹೊಸ ಬೆಳವಣಿಗೆ ಜರುಗಿದ್ದು , ಹುದ್ದೆಗೆ ರಾಜೀನಾಮೆ ಸಲ್ಲಿಸಿರುವುದಾಗಿ ಸುಂಡ್
ಗುರುವಾರ ಕ್ಯಾಪಿಟಲ್ ಪೊಲೀಸ್ ಮಂಡಳಿಗೆ ಬರೆದ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಚುನಾವಣಾ ಫಲಿತಾಂಶಗಳನ್ನು ಕಾಂಗ್ರೆಸ್ ಪ್ರಮಾಣೀಕರಿಸದಂತೆ ತಡೆಯುವ
ಉದ್ದೇಶದಿಂದ ಸಾವಿರಾರು ಟ್ರಂಪ್ ಬೆಂಬಲಿಗರು ಬುಧವಾರ ಕ್ಯಾಪಿಟಲ್ ಕಟ್ಟಡಕ್ಕೆ ನುಗ್ಗಿ
ದಾಂಧಲೆ ಮಾಡಿ, ಪ್ರತಿಭಟನಾಕಾರರು ಲೋಹದ ಕೊಳವೆಗಳಿಂದ ಪೊಲೀಸರ ಮೇಲೆ
ಹಲ್ಲೆ ಮಾಡಿ, ಆಸ್ತಿಪಾಸ್ತಿಗೆ ಹಾನಿಮಾಡಿದ್ದಾರೆ. ಚುನಾವಣಾ ಫಲಿತಾಂಶಗಳನ್ನು
ರದ್ದುಗೊಳಿಸಲು ಹೋರಾಟ ಮುಂದುವರಿಸಬೇಕೆಂದು ಟ್ರಂಪ್ ತಮ್ಮ ಬೆಂಬಲಿಗರಿಗೆ ಕರೆ
ಕೊಟ್ಟ ನಂತರ ವ್ಯಾಪಕ ಹಿಂಸಾಚಾರ ಜರುಗಿತ್ತು.