ಬಿಜೆಪಿಯಲ್ಲಿ ಮುಖ್ಯಮಂತ್ರಿ , ಹೈಕಮಾಂಡ್ ದುರ್ಬಲ: ಸಿದ್ದು ತಿರುಗೇಟು

ಬಿಜೆಪಿಯಲ್ಲಿ ಮುಖ್ಯಮಂತ್ರಿ , ಹೈಕಮಾಂಡ್ ದುರ್ಬಲ: ಸಿದ್ದು ತಿರುಗೇಟು

ಬೆಂಗಳೂರು, ಜೂನ್ 10  ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.
ಅದರೆ ಅದರ ಅರ್ಥ ಬಿಜೆಪಿಯಲ್ಲಿ ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ಎರಡೂ ದುರ್ಬಲ. ಜೊತೆಗೆ ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಯಡಿಯೂರಪ್ಪ ಅವರನ್ನು ಬದಲಿಸಿ ಎಂದು ಯಾರು ಒತ್ತಾಯ ಮಾಡಿಲ್ಲ. ಆ ಬಗ್ಗೆ ದೆಹಲಿಯಲ್ಲಿ ಚರ್ಚೆ ನಡೆಯುತ್ತಿದೆ ಎಂದು ಹೇಳಿದ್ದೆ. ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದಾದರೆ ಶಾಸಕರಾದ ಬಸನಗೌಡ ಯತ್ನಾಳ್, ಅರವಿಂದ ಬೆಲ್ಲದ್, ವಿಶ್ವನಾಥ್, ರೇಣುಕಾಚಾರ್ಯ ಹಾಗೂ ಸಚಿವ ಯೋಗೀಶ್ವರ್ ವಿರುದ್ಧ ಬಿಜೆಪಿ ಹೈ ಕಮಾಂಡ್ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬಿಜೆಪಿಯಲ್ಲಿ ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ಎರಡೂ ದುರ್ಬಲ. ಅರುಣ್ ಸಿಂಗ್ ಬದಲಾವಣೆ ಬಗ್ಗೆ ಮಾತನಾಡಬೇಡಿ ಎಂದಿದ್ದಾರೆ. ಹಾಗಾದರೆ ಬದಲಾವಣೆ ಆಗಬೇಕು ಎಂದವರ ವಿರುದ್ಧ ಏಕೆ ಕ್ರಮವಿಲ್ಲ. ಇದರಿಂದ ರವಾನೆಯಾಗುವ ಸಂದೇಶ ಏನು? ಯಡಿಯೂರಪ್ಪ ಅವರೇ ಕಳಪೆ ಮುಖ್ಯಮಂತ್ರಿ. ಇನ್ನು ಬೇರೆ ಸಚಿವರ ಮೌಲ್ಯ ಮಾಪನಕ್ಕೆ ಅರ್ಥವೆ ಇಲ್ಲ ಎಂದೂ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

 

, , ,

Leave a Reply

Your email address will not be published. Required fields are marked *