ಜಿ-7 ಶೃಂಗಸಭೆಯಲ್ಲಿ ಭಾಗವಹಿಸಲು ಬ್ರಿಟನ್ ತಲುಪಿದ ಬೈಡೆನ್‍

ಜಿ-7 ಶೃಂಗಸಭೆಯಲ್ಲಿ ಭಾಗವಹಿಸಲು ಬ್ರಿಟನ್ ತಲುಪಿದ ಬೈಡೆನ್‍

ಲಂಡನ್‍, ಜೂನ್‍ 10– ವಾರಾಂತ್ಯದಲ್ಲಿ ನಡೆಯುವ ಜಿ-7 ರಾಷ್ಟ್ರಗಳ ಒಕ್ಕೂಟದ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್‍ ಇಂದು ಇಲ್ಲಿಗೆ ತಲುಪಿದ್ದಾರೆ.
ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಬೈಡೆನ್ ಅವರ ಮೊದಲ ವಿದೇಶ ಭೇಟಿ ಇದಾಗಿದೆ.
ಮುಂದಿನ ಎಂಟು ದಿನಗಳಲ್ಲಿ ಬೈಡೆನ್‍ ಅವರು ಜಿ-7, ನ್ಯಾಟೋ ಮತ್ತು ಐರೋಪ್ಯ ಒಕ್ಕೂಟದ ಮುಖ್ಯಸ್ಥರನ್ನು ಭೇಟಿ ಮಾಡಲಿದ್ದು, ಸ್ವಿಟ್ಜರ್ಲೆಂಡ್ ನಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಶೃಂಗಸಭೆ ನಡೆಸಲಿದ್ದಾರೆ.
ಎರಡೂ ದೇಶಗಳ ನಡುವೆ ಪ್ರಯಾಣ ಚಟುವಟಿಕೆಗಳನ್ನು ಪುನರಾರಂಭಿಸುವ ಕುರಿತು ಬ್ರಿಟನ್‍ ಪ್ರಧಾನಿ ಬೋರಿಸ್ ಜಾನ್ಸನ್‍ ಅವರೊಂದಿಗೆ ಬೈಡೆನ್‍ ಮಾತುಕತೆ ನಡೆಸುವ ನಿರೀಕ್ಷೆ ಇದೆ.
ಗುರುವಾರ ಸಂಜೆ ಬೈಡೆನ್‍ ಮತ್ತು ಜಾನ್ಸನ್‍ ಕಾರ್ನ್ ವಾಲ್ ನಲ್ಲಿ ಭೇಟಿ ಮಾಡಲಿದ್ದಾರೆ. ತಂತ್ರಜ್ಞಾನ ಕುರಿತ ಮಹತ್ವ ಒಪ್ಪಂದಕ್ಕೆ ಇಬ್ಬರೂ ನಾಯಕರು ಸಹಿ ಹಾಕುವ ಸಾಧ್ಯತೆ ಇದೆ ಪ್ರಕಟಣೆ ತಿಳಿಸಿದೆ.

,

Leave a Reply

Your email address will not be published. Required fields are marked *