ದೇವೇಗೌಡರು ಕಣ್ಣೀರು ಹಾಕಿದ್ದಕ್ಕೆ ಸಿದ್ದರಾಮಯ್ಯ ಡಿಸಿಎಂ ಆದ್ರು ನನ್ನ ಮಗ ಆಗಲಿಲ್ಲಾ : ಮಾಜಿ ಪ್ರಧಾನಿ ದೇವೇಗೌಡ ಟಾಂಗ್

ದೇವೇಗೌಡರು ಕಣ್ಣೀರು ಹಾಕಿದ್ದಕ್ಕೆ ಸಿದ್ದರಾಮಯ್ಯ ಡಿಸಿಎಂ ಆದ್ರು ನನ್ನ ಮಗ ಆಗಲಿಲ್ಲಾ : ಮಾಜಿ ಪ್ರಧಾನಿ ದೇವೇಗೌಡ ಟಾಂಗ್


ತುಮಕೂರು : ದೇವೇಗೌಡರು ಕಣ್ಣೀರು ಹಾಕಿದ್ದಕ್ಕೆ ಸಿದ್ದರಾಮಯ್ಯ ಡಿಸಿಎಂ ಆದ್ರು ನನ್ನ ಮಗ ಆಗಲಿಲ್ಲಾ ಎಂದು ಮಾಜಿ ಪ್ರಧಾನಿ ದೇವೇಗೌಡ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ. ಶಿರಾ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನವ್ರು ರಾಜಕೀಯಕ್ಕೆ ಯಾವಾಗ ಬಂದ್ರು. ದೇವೇಗೌಡ್ರು ಹಿಂದಿನಿಂದಲೂ ಕೆಲಸ ಮಾಡ್ತಿದ್ದಾರೆ. 20 ವರ್ಷ ಆದ್ಮೇಲೆ ಅವ್ರು ನಮ್ ಜೊತೆ ಬಂದರು ಎಂದು ಮಾಜಿ ಪ್ರಧಾನಿ ದೇವೇಗೌಡ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.
ಎರಡೂ ರಾಷ್ಟ್ರೀಯ ಪಕ್ಷಗಳು ನಮ್ಮ ಮೇಲೆ ದಾಳಿ ಮಾಡ್ತಿವೆ. ಅವ್ರ ದಾಳಿಗೆ ಪ್ರತ್ಯುತ್ತರವಾಗಿ ಎಲ್ಲ ವಿಷಯವನ್ನ ಹೊರಹೊಮ್ಮಿಸಿ ಮಾತನಾಡೋಕೆ ಸಿದ್ದನಿದ್ದೇನೆ. ಇವತ್ತು ಒಂದೇ ದಿನ ಅಲ್ಲಾ,ಹತ್ತು ದಿನ ಇಲ್ಲೇ ಇರ್ತೀನಿ. ಯಾರ್ಯಾರು ಏನೇನು ದಾಳಿ ಮಾಡ್ತಾರೆ,ಅವ್ರಿಗೆ ಉತ್ತರ ಕೊಡೋಕೆ ನಾನಿಲ್ಲೇ ಇರ್ತೀನಿ. ನಾನು ದಾರಿ ತಪ್ಪಿ ಮಾತಾಡೋದಿಲ್ಲಾ. ನಡೆದ ಘಟನಾವಳಿಗಳನ್ನ ಹೇಳೋಕೆ ನನಗ್ಯಾವ ಭಯನೂ ಇಲ್ಲಾ. ಸಮರ್ಥವಾಗಿ ಉತ್ತರ ಕೊಡೋಕೆ ಈಗ್ಲೂ ಶಕ್ತಿ ಇದೆ,ಆ ಕೆಲ್ಸ ಮಾಡ್ತೀನಿ ಎಂದು ತಿಳಿಸಿದ್ದಾರೆ.
ಶಿರಾ ಉಪಚುನಾವಣೆ ಪ್ರಚಾರಕ್ಕೆ ಮೊದಲ ಬಾರಿ ಬಂದಿದ್ದೇನೆ. ನಾನು ಇಲ್ಲೇ‌ ಇರ್ತೀನಿ. ನವೆಂಬರ್ 1 ರವರೆಗೂ ಉಪಚುನಾವಣೆ ಕೆಲಸ ಮಾಡೋಕೆ ಟೊಂಕಕಟ್ಟಿ ಬಂದಿದ್ದೇನೆ. ನಾನು ಸಿಎಂ ಆಗಿದ್ದಾಗ ತುಮಕೂರಲ್ಲಿ 9 ಜೆಡಿಎಸ್ ಶಾಸಕರು ಗೆದಿದ್ರು. ಈತ್ತೀಚೆಗೆ 4 ಜನ ಗೆದಿದ್ದಾರೆ,ಅದ್ರಲ್ಲಿ ಸತ್ಯನಾರಾಯಣ್ ಅಗಲಿದ್ದಾರೆ. ಅವ್ರ ಶ್ರೀಮತಿ ಅವ್ರನ್ನೇ ನಿಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ.
ನಮ್ಮಲ್ಲಿ ಕೆಲವರನ್ನ ಸೆಳೆಕೊಂಡು ಹೋಗಿರಬಹುದು,ನಾನು ದೃತಿಗೆಡಲ್ಲಾ. ಜನತೆ ಎಲ್ಲವನ್ನೂ ಎದುರಿಸಿ‌ ನಿಂತು ನಮ್ಮ ಅಭ್ಯರ್ಥಿಯನ್ನ ಗೆಲ್ಲಿಸ್ತಾರೆ. ಎರಡೂ ರಾಷ್ಟ್ರೀಯ ಪಕ್ಷಗಳು ಈ ಪ್ರಾದೇಶಿಕ ಪಕ್ಷವನ್ನ ಸಂಪೂರ್ಣವಾಗಿ ನಾಶ ಮಾಡ್ತೀನಿ ಅನ್ನೋ ಪಣತೊಟಿದ್ದಾರೆ. ಆದರೇ ಜನ ಈ ಪ್ರಾದೇಶಿಕ ಪಕ್ಷದ ಅವಶ್ಯಕತೆಯನ್ನ ಅರ್ಥ ಮಾಡಿಕೊಂಡಿದ್ದಾರೆ. ಹಣದ ಹೊಡೆತ ಆದರೂ ಕಾರ್ಯಕರ್ತರು ಹುರುಪಿನಿಂದ ಕೆಲಸ ಮಾಡ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಶಾಸಕ ಎಸ್.ಆರ್.ಶ್ರೀನಿವಾಸದ ಗೈರು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವ್ರಿಗೆ ಕೊರೋನಾ ಅಂತಾ ಹೇಳಿದ್ದಾರೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸೋದು ಬೇಡ ಎಂದು ತಿಳಿಸಿದ್ದಾರೆ.

, ,

Leave a Reply

Your email address will not be published. Required fields are marked *