ಅಂಬರೀಶ್ ವಿಚಾರವಾಗಿ ಮಾತನಾಡುವಾಗ ಪ್ರಜ್ಞೆ ಇರಲಿ; ಕುಮಾರಸ್ವಾಮಿ ವಿರುದ್ಧ ರಾಕ್ ಲೈನ್ ವೆಂಕಟೇಶ್ ಆಕ್ರೋಶ

ಅಂಬರೀಶ್ ವಿಚಾರವಾಗಿ ಮಾತನಾಡುವಾಗ ಪ್ರಜ್ಞೆ ಇರಲಿ; ಕುಮಾರಸ್ವಾಮಿ ವಿರುದ್ಧ ರಾಕ್ ಲೈನ್ ವೆಂಕಟೇಶ್ ಆಕ್ರೋಶ

ಬೆಂಗಳೂರು: ಕೆಆರ್‌ಎಸ್‌ ಡ್ಯಾಂ ಮತ್ತು ಅಕ್ರಮ ಗಣಿಗಾರಿಕೆ ವಿಷಯದಲ್ಲಿ ಮಂಡ್ಯದ ಸಂಸದೆ ಸುಮಲತಾ ಅಂಬರೀಷ್‌ ಹಾಗೂ ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ನಡುವಣ ಸಮರ ತಾರಕಕ್ಕೆತ್ತಿರುವಾಗಲೇ ಅಂಬರೀಷ್‌ ಕುಟುಂಬದ ಆತ್ಯಾಪ್ತ ರಾಕ್‌ಲೈನ್‌ ವೆಂಕಟೇಶ್‌ ರಂಗಪ್ರವೇಶ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಾಕ್ ಲೈನ್ ವೆಂಕಟೇಶ್, ಹೆಚ್.ಡಿ.ಕುಮಾರಸ್ವಾಮಿ ಅವರು ಅಂಬರೀಶ್ ವಿಚಾರವಾಗಿ ಮಾತನಾಡುವಾಗ ಪ್ರಜ್ಞೆ ಇರಲಿ, ಭ್ರಷ್ಟಾಚಾರ ಅಂಆರೆ ಮತ್ತೊಂದು ಕಡೆ ಸ್ನೇಹಿತ ಅಂತಾರೆ. ಚಿತ್ರರಂಗದ ಬಗ್ಗೆ ಮಾತನಾಡುತ್ತೀರಾ ಅಲ್ವಾ? ಚಿತ್ರರಂಗದಿಂದ ನೀವೂ ಲಾಭ ಮಾಡಿಕೊಂಡಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಚಿತ್ರರಂಗದಿಂದ ಲಾಭಪಡೆದುಕೊಂಡು ಈಗ ಚಿತ್ರರಂಗದ ಬಗ್ಗೆ ಮಾತನಾಡುತ್ತಿದ್ದೀರಾ. ನೀವು ಸಿಎಂ ಆದಾಗ ಚಿತ್ರರಂಗಕ್ಕೆ ಏನು ಮಾಡಿದಿರಿ ? ಎದುರುಗಡೆ ಸ್ನೇಹಿತ ಅಂತೀರಾ? ನನ್ನ ಪ್ರಾಣ ಅಂತೀರಾ ಹಿಂದಿನಿಂದ ನಿಮ್ಮ ಕಡೆಯವರಿಂದ ಬೈಸುತ್ತೀರಾ ? ಗಣಿಗಾರಿಕೆ ಆರೋಪ ಮಾಡುತ್ತೀದ್ದೀರಾ ? ಸತ್ತಿರುವ ವ್ಯಕ್ತಿಯ ಹೆಸರನ್ನು ತಂದು ಇಂತಹ ರಾಜಕಾರಣ ಮಾಡಲು ನಾಚಿಕೆಯಾಗುವುದಿಲ್ಲವೇ ? ಇದೇ ರೀತಿ ಮುಂದುವರಿದರೆ ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

, ,

Leave a Reply

Your email address will not be published. Required fields are marked *