ನಕಲಿ ಗುರುತಿನಡಿ ಕಳೆದ 10 ವರ್ಷಗಳಿಂದ ಭಾರತದಲ್ಲಿ ಮಂಗಳಮುಖಿ ವೇಷದಲ್ಲಿ ಬದುಕುತ್ತಿದ್ದ ಬಾಂಗ್ಲಾ ಪ್ರಜೆಯನ್ನು ಭೋಪಾಲ್ ಪೊಲೀಸರು ಪೊಲೀಸರು ಬಂಧಿಸಿದ್ದಾರೆ. ಅಕ್ರಮ ವಲಸೆ ವಿರುದ್ಧದ ಕಾರ್ಯಾಚರಣೆ ವೇಳೆ ‘ನೇಹಾ’ ಎಂಬ ನಕಲಿ ಗುರುತಿನೊಂದಿಗೆ ವಾಸಿಸುತ್ತಿದ್ದ ಬಾಂಗ್ಲಾ ಪ್ರಜೆ ಅಬ್ದುಲ್ ಕಲಾಂ ಎಂಬಾತ ಪೊಲೀಸ್ ಬಲೆಗೆ ಬಿದ್ದು ಜೈಲು ಸೇರಿದ್ದಾನೆ.
10ನೇ ವರ್ಷದಲ್ಲಿ ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿದ್ದ ಅಬ್ದುಲ್, 20 ವರ್ಷ ಮುಂಬೈನಲ್ಲಿ ಕಳೆದಿದ್ದಾನೆ. 8 ವರ್ಷದಿಂದ ಭೋಪಾಲ್‌ನ ಬುದ್ವಾರಾದಲ್ಲಿ ನೆಲೆಸಿರುವ ಅವನು ಮಂಗಳಮುಖಿ ಎಂದು ಹೇಳಿಕೊಂಡು ಸ್ಥಳೀಯ ಹಿಜಡಾ ಸಮುದಾಯದ ಸಕ್ರಿಯ ಸದಸ್ಯನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ಏಜೆಂಟರ ಸಹಾಯದಿಂದ ನಕಲಿ ದಾಖಲೆಗಳನ್ನು ಬಳಸಿಕೊಂಡು ಆಧಾರ್, ಪಡಿತರ ಚೀಟಿ, ಪಾಸ್‌ಪೋರ್ಟ್ ಸೇರಿದಂತೆ ಪ್ರಮುಖ ದಾಖಲೆ ಪಡೆದುಕೊಂಡಿದ್ದಾರೆ ಎಂಬುದು ತನಿಖೆಯ ವೇಳೆ ಬಹೊಇರಂಗಗೊಂಡಿದೆ. ನಕಲಿ ಗುರುತಿನ ಚೀಟಿ ಬಳಸಿಕೊಂಡು ನಕಲಿ ಪಾಸ್‌ಪೋರ್ಟ್ ಮೂಲಕ ವಿದೇಶಕ್ಕೂ ಪ್ರಯಾಣ ಮಾಡಿದ್ದಾನೆ. ಬುದ್ವಾರಾದಲ್ಲಿ ಹಲವು ಮನೆಗಳನ್ನು ಬದಲಾಯಿಸಿರುವ ಈತ, ನೇಹಾ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದ. ಮಹಾರಾಷ್ಟ್ರದಲ್ಲೂ ಮಂಗಳಮುಖಿಯಾಗಿ ಸಕ್ರಿಯವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುತನ್ನು ಮರೆಮಾಚಲು ಮಂಗಳಮುಖಿಯಾಗಿ ವೇಷ ಮರೆಸಿಕೊಂಡಿದ್ದಾನಾ ಅಥವಾ ಜೈವಿಕವಾಗಿ ಲಿಂಗತ್ವ ಅಲ್ಪಸಂಖ್ಯಾತನಾ ಎಂಬ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.