ಕೊರೋನಾ ಸೋಂಕಿಗೆ ಬಾಂಗ್ಲಾದೇಶದ ರಕ್ಷಣಾ ಕಾರ್ಯದರ್ಶಿ ಸಾವು

ಢಾಕಾ: ಕೊರೋನಾವೈರಸ್ ವಿಶ್ವಾದ್ಯಂತ ಹೆಚ್ಚುತ್ತಿದ್ದು, ಇದೀಗ ಕೆಲ ದಿನಗಳ ಹಿಂದೆ ಕೊರೋನಾ ಸೋಂಕಿಗೆ ಒಳಗಾಗಿದ್ದ ಬಾಂಗ್ಲಾದೇಶ ರಕ್ಷಣಾ ಕಾರ್ಯದರ್ಶಿ ಅಬ್ದುಲ್ಲಾ ಅಲ್ ಮೊಹಸಿನ್ ಚೌಧರಿ ಸೋಮವಾರ ನಿಧನವಾಗಿದ್ದಾರೆ ಎಂದು ಬಾಂಗ್ಲಾ ಸರ್ಕಾರ ಖಚಿತಪಡಿಸಿದೆ.

ಚೌಧರಿ ನಿನ್ನೆ ಬೆಳಗ್ಗೆ ಢಾಕಾದ ಸಂಯೋಜಿತ ಮಿಲಿಟರಿ ಆಸ್ಪತ್ರೆಯಲ್ಲಿ (ಸಿಎಮ್ಹೆಚ್) ಚಿಕಿತ್ಸೆ ಫಲಿಸದೆ ನಿಧನರಾದರು ಎಂದು ರಕ್ಷಣಾ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸೆಲೀನಾ ಹಕ್ ಅವರ ಹೇಳಿಕೆ ಉಲ್ಲೇಖಿಸಿ ಅಲ್ಲಿನ ಮಾಧ್ಯಮ ಪ್ರಕಟಿಸಿದೆ.

ಕೊರೋನಾವೈರಸ್ ಸೋಂಕು ದೃಢಪಟ್ಟ ನಂತರ ಅವರನ್ನು ಮೇ 29 ರಂದು ಸಿಎಮ್ಹೆಚ್ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಜೂನ್ 6 ರಂದು ಅವರನ್ನು ತೀವ್ರ ನಿಗಾ ಘಟಕಕ್ಕೆ ವರ್ಗಾಯಿಸಲಾಗಿತ್ತು.

Leave a Reply

Your email address will not be published. Required fields are marked *