ರೈತರನ್ನು ತಪ್ಪು ದಾರಿಗೆಳೆಯುವ ಪ್ರಯತ್ನ ಸಫಲ ಆಗುವುದಿಲ್ಲ: ಸಚಿವ ಡಾ.ಕೆ.ಸುಧಾಕರ್

ರೈತರನ್ನು ತಪ್ಪು ದಾರಿಗೆಳೆಯುವ ಪ್ರಯತ್ನ ಸಫಲ ಆಗುವುದಿಲ್ಲ: ಸಚಿವ
ಡಾ.ಕೆ.ಸುಧಾಕರ್
ಚಿಕ್ಕಬಳ್ಳಾಪುರ,ಜ 26 ದೇಶದ ಬೆನ್ನೆಲುಬು ರೈತರ ಜೀವನಗುಣಮಟ್ಟ
ಸುಧಾರಣೆಗೆ ಪ್ರಧಾನಿ ನರೇಂ ದ್ರ ಮೋದಿ ಕೃಷಿಯಲ್ಲಿ ಸುಧಾರಣೆ ತಂದಿದ್ದಾರೆ. ಆದರೆ
ರಾಜಕೀಯ ಪ್ರೇರಿತವಾಗಿ ರೈತರನ್ನು ತಪ್ಪು ದಾರಿಗೆ ಎಳೆ ಯುತ್ತಿದ್ದು, ಇದು ಸಫಲ
ಆಗುವುದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್
ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ವತಿಯಿಂದ ನಡೆದ 72 ನೇ ಗಣರಾಜ್ಯೋತ್ಸವ
ಸಮಾರಂಭದಲ್ಲಿ ಮಾತನಾಡಿದ ಅ ವರು,ಪ್ರಧಾನಿ ನರೇಂದ್ರ ಮೋದಿ ಕೆಲ
ಕಾನೂನುಗಳಲ್ಲಿ ಬದಲಾವಣೆ ತರುವ ಮೂಲಕ ಅಭಿವೃದ್ಧಿ ಮಾಡಿದ್ದಾ ರೆ.ಕಿಸಾನ್
ಸಮ್ಮಾನ್ ಯೋಜನೆ ಅಡಿ ನೇರವಾಗಿ ಖಾತೆಗೆ ರೈತರ ಬ್ಯಾಂಕ್ ಖಾತೆಗೆ ಹಣ ಜಮೆ
ಆಗುತ್ತದೆ.ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೂಡ ಈ ಯೋಜನೆಯಡಿ
ಹಣ ನೀಡುತ್ತಿ ದ್ದಾರೆ.ಆದರೆ ದುರದೃಷ್ಟ ವೆಂಬಂತೆ ಕೆಲ
ಸಂಘಟನೆ,ಮಧ್ಯವರ್ತಿ,ರಾಜಕೀಯ ಪ್ರೇರಿತವಾಗಿ ಪಕ್ಷಗಳು ರೈತರನ್ನು ತಪ್ಪು ದಾರಿಗೆ
ಎಳೆಯು ತ್ತಿವೆ ಎಂದರು.
ರಾಜ್ಯದಲ್ಲಿ ಕೈಗೊಂಡ ತ್ವರಿತ ಕ್ರಮಗಳಿಂದ ಕೊರೊನಾ ನಿಯಂತ್ರಣಕ್ಕೆ ಬಂದಿದೆ.ಅತಿ
ಶೀಘ್ರದಲ್ಲಿ ಕೊರೋನಾ ಲಸಿಕೆ ದೊರೆತಿದ್ದು,ಬೇರೆ ದೇಶಗಳಿಗೂ ರಫ್ತು

ಮಾಡಲಾಗುತ್ತಿದೆ.ಬ್ರೆಜಿಲ್ ನ ಅಧ್ಯಕ್ಷರು ಲಸಿಕೆ ನೀಡಿರುವುದಕ್ಕೆ ಭಾರತಕ್ಕೆ ಧನ್ಯವಾದ
ಹೇಳಿದ್ದಾರೆ.ಈ ರೀತಿ ಬೇರೆ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವ
ಕಾರ್ಯ ವನ್ನು ಪ್ರಧಾನಿ ಮೋದಿ ಮಾಡಿದ್ದಾರೆ.ಜಗತ್ತಿನ ಮುಂದೆ ತಲೆ ಎತ್ತಿ ನಡೆಯುವಂತೆ
ಭಾರತ ಬೆಳೆದಿದೆ.ಭಾರತದ ಲ್ಲಿ ಅತಿ ಹೆಚ್ಚು ಯುವಜನರಿದ್ದಾರೆ.ದೇಶದಲ್ಲಿ ಉತ್ತಮ
ಮಾನವ ಸಂಪನ್ಮೂಲವಿದ್ದು,ಇದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು.ಮೂಲಭೂತ
ಹಕ್ಕುಗಳಂತೆ,ಮೂಲಭೂತ ಕರ್ತವ್ಯಗಳಿವೆ.ಇವೆರಡೂ ಒಂದೇ ನಾಣ್ಯದ ಎರ ಡು
ಮುಖಗಳಾಗಿದ್ದು,ನಾಗರಿಕರಾಗಿ ದೇಶವನ್ನು ಉನ್ನತಿಗೆ ಕೊಂಡೊಯ್ಯಲು ಕರ್ತವ್ಯ
ಪಾಲಿಸಬೇಕು.
ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ರಚನೆಯಾದ ಸಂವಿಧಾನ ಜಾರಿಯಾದ
ದಿನವಿದು.ಕನ್ನಡಿಗ ಬೆನಗಲ್ ನರಸಿಂಗರಾಯರು ಆ ಸಮಿತಿಯಲ್ಲಿದ್ದರು.ಅಂಬೇಡ್ಕರ್
ನೀಡಿದ ಸಂವಿಧಾನ ಸಮಬಾಳು,ಸಮಪಾಲು ಎಂಬ ಚಿಂತನೆಯಿಂದ ಕೂಡಿದೆ.ಇಡೀ
ವಿಶ್ವದಲ್ಲೇ ಅತ್ಯಂತ ದೊಡ್ಡದಾದ ಪ್ರಜಾಪ್ರಭುತ್ವ ದೇಶಕ್ಕೆ ಪೂರಕವಾದ ಸಂವಿ ಧಾನವಿದು
ಎಂದರು.
ರೈತರು,ಯೋಧರನ್ನು ಸ್ಮರಿಸಲು ಜೈ ಜವಾನ್ ಜೈ ಕಿಸಾನ್ ಎಂದು ಲಾಲ್ ಬಹಾದ್ದೂರ್
ಶಾಸ್ತ್ರಿ ಹೇಳಿದ್ದರು.ವಿ ಜ್ಞಾನಿಗಳನ್ನು ಸ್ಮರಿಸಲು ಮಾಜಿ ಪ್ರಧಾನಿ ಅಟಲ್ ಬಿಹಾರಿ
ವಾಜಪೇಯಿಯವರು ಜೈ ವಿಜ್ಞಾನ್ ಎಂದು ಹೇಳಿ ದ್ದರು.ಅದೇ ರೀತಿ ಕವಿ ಕುವೆಂಪು
ವಿಶ್ವಮಾನವ ಸಂದೇಶ ಸಾರಲು ಜೈ ಇನ್ಸಾನ್ ಎಂಬ ಸಂದೇಶ ಸಾರಬೇಕಿದೆ.
ಕೊರೋನಾ ವಿರುದ್ಧದ ಹೋರಾಟದಲ್ಲಿ ಮಾಸ್ಕ್ ಧರಿಸುವುದು,ಶುಚಿತ್ವ ಕಾಪಾಡುವುದು
ಎಲ್ಲರ ಕರ್ತವ್ಯವಾಗಿ ದೆ.ದೇಶದಲ್ಲಿ ಭದ್ರತಾ ವ್ಯವಸ್ಥೆ ಉತ್ತಮವಾಗಿದ್ದು,ಬೇರೆ ದೇಶಗಳು
ಗಡಿ ವಿಚಾರದಲ್ಲಿ ಭಯಪಡುವಂತಾಗಿದೆ. ಜಿಲ್ಲೆಯ 44 ಕೆರೆಗಳಿಗೆ ಸಂಸ್ಕರಿತ ನೀರು

ಹರಿಸಲಾಗಿದೆ.ಮೆಡಿಕಲ್ ಕಾಲೇಜು ನಿರ್ಮಾಣ ಪ್ರಗತಿಯಲ್ಲಿದೆ.ಶುದ್ಧ ಗಾಳಿಯಲ್ಲಿ ನಗರಕ್ಕೆ
7ನೇ ಸ್ಥಾನ,ಉದ್ಯೋಗ ಖಾತರಿಯಲ್ಲಿ ಮಾನವ ದಿನ ಸೃಜಿಸುವಲ್ಲಿ ಜಿಲ್ಲೆಗೆ ಮೊದಲ ಸ್ಥಾನ
ಸಿಕ್ಕಿದೆ.ಮುಖ್ಯಮಂತ್ರಿಗಳು ಉತ್ತಮ ನಿರ್ಧಾರ ಕೈಗೊಂಡಿದ್ದು,ಸಂಪುಟ ಸಂಪೂರ್ಣ
ಆಗಿದೆ.ನಾವೆಲ್ಲರೂ ವಿಶ್ವಾ ಸಕ್ಕೆ ಧಕ್ಕೆಯಾಗದಂತೆ ಜವಾಬ್ದಾರಿ ನಿರ್ವಹಿಸುತ್ತೇವೆ.
ಸರ್ಕಾರ ಇನ್ನು ಮುಂದೆ ಯೂ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಅವರು
ತಿಳಿಸಿದರು.

Leave a Reply

Your email address will not be published. Required fields are marked *