ಮುಂಬೈನಲ್ಲಿ ವಸತಿ ಕಟ್ಟಡ ಕುಸಿದು ಕನಿಷ್ಠ 11 ಮಂದಿ ಸಾವು

ಮುಂಬೈನಲ್ಲಿ ವಸತಿ ಕಟ್ಟಡ ಕುಸಿದು ಕನಿಷ್ಠ 11 ಮಂದಿ ಮೃತ

ಮುಂಬೈ: 4 ಮಹಡಿಯ ಕಟ್ಟಡವೊಂದು ಧರೆಗುರುಳಿದ ಪರಿಣಾಮ 11 ಮಂದಿ ಸಾವನ್ನಪ್ಪಿದ ಘಟನೆ ಮುಂಬೈನ ಪಶ್ಚಿಮ ಮಲಾಡ್ ನ ಮಾಲ್ವಾನಿ ಪ್ರದೇಶದಲ್ಲಿ ನಡೆದಿದೆ. 7 ಮಂದಿಗೆ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕಟ್ಟಡ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಪಕ್ಕದ 3 ಮನೆಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಇನ್ನೂ ಹಲವರು ಸಿಲುಕಿ ಹಾಕಿಕೊಂಡಿದ್ದು ಅವರ ಶೋಧ ಕಾರ್ಯ ನಡೆಯುತ್ತಿದೆ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ ತಿಳಿಸಿದೆ.

ಸ್ಥಳಕ್ಕೆ ಪೊಲೀಸರು, ರಕ್ಷಣಾ ಕಾರ್ಯ ಸಿಬ್ಬಂದಿ ಆಗಮಿಸಿದ್ದು ರಕ್ಷಣಾ ಕಾರ್ಯ ಮುಂದುವರಿದಿದೆ.

ಇದರ ಬಳಿಯಿರುವ ಇನ್ನೂ ಮೂರು ಕಟ್ಟಡಗಳು ಆತಂಕದ ಪರಿಸ್ಥಿತಿಯಲ್ಲಿದ್ದು, ಅಲ್ಲಿದ್ದ ಎಲ್ಲರನ್ನೂ ಕೂಡಲೇ ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ ಎಂದು ಬೃಹನ್ ಮುಂಬೈ ನಗರಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.

ಇದೊಂದು ದುರದೃಷ್ಟಕರ ಘಟನೆಯಾಗಿದೆ. ನೆಲಮಹಡಿ ಸೇರಿದಂತೆ ಮೂರು ಮಹಡಿಗಳಿರುವ ಕಟ್ಟಡ ಮತ್ತೊಂದು ಕಟ್ಟಡದ ಮೇಲೆ ಕುಸಿದುಬಿದ್ದಿದೆ. ಕಾರ್ಯಾಚರಣೆಯಲ್ಲಿ ಇದುವರೆಗೆ 18 ಮಂದಿಯನ್ನು ರಕ್ಷಿಸಲಾಗಿದೆ. 11 ಮಂದಿ ಮೃತಪಟ್ಟಿದ್ದಾರೆ.
ಕಟ್ಟಡ ಕುಸಿದು ಬಿದ್ದ ಬಗ್ಗೆ ಸಮಗ್ರವಾಗಿ ತನಿಖೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ದಿಲೀಪ್ ಸಾವಂತ್ ತಿಳಿಸಿದ್ದಾರೆ.

,

Leave a Reply

Your email address will not be published. Required fields are marked *