ಕಾವೇರಿ ನೀರಿಗಾಗಿ ಹೋರಾಟ ಕುರಿತ ಪ್ರಕರಣಗಳ ವಜಾಕ್ಕೆ ಕಾವೇರಿ ಹೋರಾಟಗಾರರಿಂದ ಮನವಿ

ಪಾಂಡವಪುರ: ನಾಡಿನ ಜಲ, ಭಾಷೆಗಾಗಿ ಹೋರಾಟ ಮಾಡುವುದು ನಮ್ಮ‌ ಹಕ್ಕು, ಅದೇ ರೀತಿ ನಮ್ಮ ಕಾವೇರಿ ನೀರಿಗಾಗಿ ಹೋರಾಟ ಮಾಡಿದ್ದವರ ಮೇಲೆ ಕಾವೇರಿ ಹೋರಾ ಟದ ಸಂಪೂರ್ಣ ಎಲ್ಲಾ ಕೇಸುಗಳನ್ನು ವಜಾಗೊಳಿಸಿ ಮುಕ್ತರನ್ನಾಗಿ ಮಾಡಬೇಕೆಂದು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಜಿಲ್ಲಾ ಉಸ್ತು ವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರಿಗೆ ಪಾಂಡವಪುರ ಕಾವೇರಿ ಹೋರಾಟಗಾರ ವಿಷ್ಣು ವಿಠಲ್, ಎಲ್ಲಾ ಹೋರಾಟಗಾರರ ಪರವಾಗಿ ಮನವಿ ಮಾಡಿಕೊಂಡಿದ್ದಾರೆ.

ಪಾಂಡವಪುರ ಪಟ್ಟಣದಲ್ಲಿ ಕಾವೇರಿ ಹೋರಾಟದಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಕುಮಾರ್, ಮಂಜು, ಸಂಜು, ಫಿಜಾನ್ ಸೇರಿದಂತೆ ಕಾವೇರಿ ಹೋರಾಟಗಾರರು ಸುದ್ದಿ ಗೋಷ್ಟಿಯಲ್ಲಿ ಕಾವೇರಿ ಹೋರಾಟದ ಪ್ರಕರಣಗಳನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದರು. ಕಾವೇರಿಗಾಗಿ ನಾವೆಲ್ಲಾ ಒಗ್ಗಟ್ಟಾಗಿ ಹೋರಾಟ ಮಾಡಿದ್ದೇವೆ. ನಾಡು, ನುಡಿ, ಜಲ, ಭಾಷೆಗಾಗಿ ಹೋರಾಟ ಮಾಡಿದವರಿಗೆ ಜೈಲು ಶಿಕ್ಷೆ ನೀಡುವುದು ಸರಿಯೇ. ನಮ್ಮ ಕಾವೇರಿ ಹೋರಾಟದ ಪ್ರಕರಣಗಳನ್ನು ಸಂಪೂರ್ಣ ವಜಾಗೊಳಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *