ನಟ- ಕಾಂಗ್ರೆಸ್ ಮುಖಂಡ ರಾಜ್ ಬಬ್ಬರ್ ಗೆ ಜೈಲು ಶಿಕ್ಷೆ

ಲಕ್ನೋ: ಜುಲೈ 08 ಚುನಾವಣಾಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಾಲಿವುಡ್ ನಟ ಹಾಗೂ ಕಾಂಗ್ರೆಸ್ ಮುಖಂಡ ರಾಜ್ ಬಬ್ಬರ್‌ಗೆ ಲಕ್ನೋ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ನಟ-ರಾಜಕಾರಣಿ ರಾಜ್ ಬಬ್ಬರ್ ಸಾರ್ವಜನಿಕ ಸೇವಕನಿಗೆ ತನ್ನ ಕರ್ತವ್ಯವನ್ನು ನಿರ್ವಹಿಸದಂತೆ ತಡೆಯಲು ಸ್ವಯಂಪ್ರೇರಿತವಾಗಿ ನೋವುಂಟು ಮಾಡಿದ ಮತ್ತು ಇತರ ಮೂರು ಅಪರಾಧಗಳಿಗೆ ಶಿಕ್ಷೆ ವಿಧಿಸಲಾಯಿತು. ನ್ಯಾಯಾಲಯ ಅವರಿಗೆ 8,500 ರೂ.ದಂಡವನ್ನೂ ವಿಧಿಸಿದೆ. 1996ರ ಮೇನಲ್ಲಿ ನಡೆದ ಚುನಾವಣೆಯ ಸಂದರ್ಭದಲ್ಲಿ ರಾಜ್ ಬಬ್ಬರ್ ವಿರುದ್ಧ ಚುನಾವಣಾಧಿಕಾರಿ ಕೇಸ್ ದಾಖಲಿಸಿದ್ದರು. ಇಲ್ಲಿನ ವಜೀರ್‌ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆಗ ಸಮಾಜವಾದಿ ಪಕ್ಷದಿಂದ ರಾಜ್ ಬಬ್ಬರ್ ಸ್ಪರ್ಧಿಸಿದ್ದರು. ಪ್ರಕರಣದ ತೀರ್ಪು ಪ್ರಕಟವಾದಾಗ ರಾಜ್ ಬಬ್ಬರ್ ನ್ಯಾಯಾಲಯದಲ್ಲಿ ಹಾಜರಿದ್ದರು.
Share on:
WhatsApp