ಪತ್ನಿ ಕಿರಣ್ ರಾವ್ ಗೆ ಆಮೀರ್​ ಖಾನ್ ವಿಚ್ಛೇದನ; 15 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ

 

ಮುಂಬೈ, ಜುಲೈ 3 – ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್, ಸಿನಿಮಾ ನಿರ್ಮಾತೃ ಕಿರಣ್ ರಾವ್ ದಂಪತಿ ಪರಸ್ಪರ ವಿಚ್ಚೇದನ ಪಡೆದುಕೊಂಡಿದ್ದಾರೆ. 15 ವರ್ಷಗಳ ತಮ್ಮ ವೈವಾಹಿಕ ಜೀವನಕ್ಕೆ ಶನಿವಾರ ವಿದಾಯ ಹೇಳಿದ್ದಾರೆ. “ನಾವು ಹೊಸ ಜೀವನ ಪ್ರಾರಂಭಿಸಲು ಬಯಸಿದ್ದೇವೆ. ಪತಿ ಪತ್ನಿ ವಿಚ್ಚೇದನ ಪಡೆದುಕೊಂಡಿದ್ದರೂ, ಮಕ್ಕಳಿಗೆ ತಂದೆ ತಾಯಿಯಾಗಿ ಜೊತೆಯಾಗಿಯೇ ಮುಂದುವರಿಯಲಿದ್ದೇವೆ ಅವರು ಎಂದು ಹೇಳಿದ್ದಾರೆ.

ಈ ಜೋಡಿ 2005 ರಲ್ಲಿ ಪ್ರೇಮ ವಿವಾಹವಾಗಿದ್ದರು. ದಂಪತಿಗೆ ಆಜಾದ್ ಎಂಬ ಮಗನಿದ್ದಾನೆ. ಆದರೆ, ತಾವಿದ್ದರೂ ಬೇರ್ಪಟ್ಟರೂ, ತಮ್ಮ ಮಗ ಆಜಾದ್ ನನ್ನು ಇಬ್ಬರೂ ಕೂಡಿ ಬೆಳೆಸಲಿದ್ದೇವೆ ಎಂದು ಹೇಳಿದ್ದಾರೆ.
ಈ ಹದಿನೈದು ವರ್ಷಗಳ ದಾಂಪತ್ಯ ಪ್ರಯಾಣದಲ್ಲಿ ನಾವು ಒಟ್ಟಾಗಿ ಜೀವನ ಅನುಭವಿಸಿದ್ದೇವೆ. ಒಟ್ಟಿಗೆ ಸಂತೋಷ ಹಂಚಿಕೊಂಡಿದ್ದೇವೆ .. ನಕ್ಕಿದ್ದೇವೆ .. ನಂಬಿಕೆಯೊಂದಿಗೆ ನಮ್ಮ ಸಂಬಂಧ ಬೆಳೆದುಬಂತು ಒಬ್ಬರಿಗೊಬ್ಬರು ಪ್ರೀತಿ ಹಾಗೂ ಗೌರವ ಹಂಚಿಕೊಂಡಿದ್ದೇವೆ. ಆದರೆ ಈಗ ನಾವು ನಮ್ಮ ಜೀವನದಲ್ಲಿ ಹೊಸ ಆರಂಭ ಪ್ರಾರಂಭಿಸಲು ಬಯಸುತ್ತೇವೆ. ಪತ್ನಿ – ಪತಿ ಬೇರ್ಪಟ್ಟಿದ್ದರೂ, ನಾವು ನಮ್ಮ ಮಗ ಆಜಾದ್‌ಗೆ ಪೋಷಕರಾಗಿ ಜೊತೆಯಾಗಿ ಇರುತ್ತೇವೆ. ಸಿನಿಮಾಗಳು, ಪಾನಿ ಫೌಂಡೇಶನ್, ಇತರ ಯೋಜನೆಗಳ ವಿಷಯದಲ್ಲಿ ನಾವು ಎಂದಿನಂತೆ ಒಟ್ಟಿಗೆ ಕೆಲಸ ಮುಂದುವರಿಸುತ್ತೇವೆ. ನಮ್ಮ ಸಂಬಂಧವನ್ನು ಅರ್ಥಮಾಡಿಕೊಂಡು ಬೆಂಬಲಿಸುತ್ತಿರುವ ನಮ್ಮ ಎಲ್ಲ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಧನ್ಯವಾದಗಳು. ಅವರಿಲ್ಲದೆ ನಾವು ಈ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ನಮ್ಮ ಎಲ್ಲ ಹಿತೈಷಿಗಳಿಗೂ ನಾವು ಹೇಳುವುದಿಷ್ಟೆ. ವಿಚ್ಚೇದನ ಅಂತ್ಯವಲ್ಲ .. ಹೊಸ ಜೀವನದ ಆರಂಭವದಂತೆ ನೋಡಿ ”ಎಂದು ಅಮೀರ್ ಮತ್ತು ಕಿರಣ್ ರಾವ್ ಜಂಟಿಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಅಮೀರ್ ಖಾನ್ ಮತ್ತು ಕಿರಣ್ ರಾವ್ ಅವರದು ಪ್ರೇಮ ವಿವಾಹ. ಮೊದಲ ಪತ್ನಿ ರೀನಾ ದತ್ತಾ ಅವರಿಂದ ವಿಚ್ಚೇದನ ಪಡೆದುಕೊಂಡ ನಂತರ 2005 ರಲ್ಲಿ ಕಿರಣ್ ರಾವ್ ಅವರನ್ನು ಅಮೀರ್‌ ಖಾನ್‌ ವಿವಾಹವಾಗಿದ್ದರು. ಅಮೀರ್ ನಾಯಕನಾಗಿ ನಟಿಸಿದ್ದ ‘ಲಗಾನ್’ ಚಿತ್ರಕ್ಕೆ ಕಿರಣ್ ರಾವ್ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಚಿತ್ರದ ಶೂಟಿಂಗ್ ಸಮಯದಲ್ಲಿ ಇವರಿಬ್ಬರ ನಡುವೆ ಪ್ರೇಮ ಚಿಗುರಿತ್ತು. 2011 ರಲ್ಲಿ ಈ ದಂಪತಿ ಸರೋಗೆಸಿ ಮೂಲಕ ಆಜಾದ್ ರಾವ್ ಖಾನ್ ಎಂಬ ಗಂಡು ಮಗುವಿಗೆ ಜನ್ಮ ನೀಡಿದ್ದರು.

 

, , ,

Leave a Reply

Your email address will not be published. Required fields are marked *