ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರತ್ಯೇಕ ರಸ್ತೆ ಅಪಘಾತ, ಮೂವರ ಸಾವು


ಚಿತ್ರದುರ್ಗ, ಜನವರಿ 17 ತ್ರದುರ್ಗ ಹಿರಿಯೂರು ತಾಲೂಕಿನಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಒಟ್ಟು ಮೂವರು ಮೃತಪಟ್ಟಿದ್ದು, ಇತರೆ ಐವರು ಗಾಯಗೊಂಡಿದ್ದಾರೆ.
ಹಿರಿಯೂರು ತಾಲ್ಲೂಕಿನ ಮೇಟಿಕುರ್ಕೆ ಬಳಿ ಇಬ್ಬರು ಹಾಗೂ ವಡ್ಡನಹಳ್ಳಿ ಬಳಿ ಒಬ್ಬರು ಮೃತಪಟ್ಟಿದ್ದಾರೆ. ಈ ಎರಡೂ ರಸ್ತೆ ಅಪಘಾತಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ತಡರಾತ್ರಿ ಸಂಭವಿಸಿವೆ ಎಂದು ಪೊಲೀಸರು ಹೇಳಿದ್ದಾರೆ.

ಮೇಟಿಕುರ್ಕೆ ಬಳಿ ಅಂಚೆ ಇಲಾಖೆಯ ಕಾಗದ ಸಾಗಣೆ ಮಾಡುತ್ತಿದ್ದ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿದ್ದಾರೆ.
ಕ್ಯಾಂಟರ್ ಗಾಡಿ ವಾಹನವನ್ನು ಯಾವುದೇ ಮೂನ್ಸೂಚನೆ ನೀಡದೆ ನಿಲ್ಲಿಸಿದ್ದರಿಂದ, ದಾವಣಗೆರೆಯಿಂದ ಬೆಂಗಳೂರು ಕಡೆಗೆ ಸಾಗುತ್ತಿದ್ದ ಅಂಚೆ ಇಲಾಖೆಯ ವಾಹನ ಇಬ್ಬರಿಗೆ ಡಿಕ್ಕಿ ಹೊಡೆದಿದೆ.

ಸ್ಥಳದಲ್ಲಿಯೇ ಕುಮಾರ್ ( 24), ವಿಜಯ್ (28) ಸಾವನ್ನಪ್ಪಿದ್ದಾರೆ. ಈ ಅಪಘಾತಕ್ಕೆ ಅಂಚೆ ಇಲಾಖೆ ವಾಹನ ಚಾಲಕನ ಅತಿ ವೇಗ ಕಾರಣ ಎನ್ನಲಾಗಿದೆ. ಮತ್ತೊಂದು ಅಪಘಾತದಲ್ಲಿ ಹಿರಿಯೂರು ತಾಲೂಕಿನ ವಡ್ಡನಹಳ್ಳಿ ಬಳಿ ಲಾರಿಗೆ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಮುರುಗನ್ ( 36) ಎಂಬುವವರು ಮೃತಪಟ್ಟಿದ್ದು, ಗಾಯಗೊಂಡ ಹಲವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Leave a Reply

Your email address will not be published. Required fields are marked *