ರಾಜಸ್ವ ನಿರೀಕ್ಷಕ ಸೇರಿ ಮೂವರ ಮನೆ ಮೇಲೆ ಎಸಿಬಿ ದಾಳಿ ಶೋಧ

ರಾಜಸ್ವ ನಿರೀಕ್ಷಕ ಸೇರಿ ಮೂವರ ಮನೆ ಮೇಲೆ ಎಸಿಬಿ ದಾಳಿ ಶೋಧ
ಬೆಂಗಳೂರು, ಜ.13 ಗೋಮಾಳ ಜಮೀನಿನ ದಾಖಲೆ‌ ಬದಲಾವಣೆ ಮಾಡಿ ಖಾಸಗಿ ಬಿಲ್ಡರ್ ಗಳಿಗೆ ಅನುಕೂಲ ಮಾಡಿಕೊಟ್ಟ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಿರುವ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಬೆಂಗಳೂರು ಮತ್ತು ತುಮಕೂರಿನ ಮೂರು ಕಡೆ ದಾಳಿ ನಡೆಸಿ ಶೋಧ ಕಾರ್ಯ ಮುಂದುವರೆಸಿದೆ.
ಬೆಂಗಳೂರು ಉತ್ತರ ಹೆಚ್ಚುವರಿ (ಯಲಹಂಕ) ತಾಲ್ಲೂಕಿನ ಚಿಕ್ಕಬೆಟ್ಟಹಳ್ಳಿ ಗ್ರಾಮದ ಗೋಮಾಳದಲ್ಲಿ ಈ ಪ್ರಕರಣ ನಡೆದಿದೆ.
ಯಲಹಂಕ ತಾಲ್ಲೂಕು ಕಚೇರಿಯ ಕಂದಾಯ ನಿರೀಕ್ಷಕಿ ಬಿ.ಕೆ. ಆಶಾ ಅವರಿಗೆ ಸೇರಿರುವ ಅನ್ನಪೂರ್ಣೇಶ್ವರಿ ನಗರದ ಆರೋಗ್ಯ ಬಡಾವಣೆಯ ಮನೆ ಹಾಗೂ ಶಿರಸ್ತೇದಾರ್ ಪಿ.ಎಸ್.ಆರ್. ಪ್ರಸಾದ್ ಅವರ ತುಮಕೂರಿನ ಮನೆ ಮತ್ತು ಖಾಸಗಿ ಬಿಲ್ಡರ್ ಕೆ.ವಿ. ನಾಯ್ಡು ಅವರ ಬೆಂಗಳೂರಿನ ಡಾಲರ್ಸ್ ಕಾಲೋನಿಯ ಮನೆಗಳ ಮೇಲೆ ಎಸಿಬಿ ದಾಳಿ ಮಾಡಿದೆ.
ಎಸಿಬಿ ಬೆಂಗಳೂರು ನಗರ ಘಟಕದ ಎಸ್ ಪಿ ಕುಲದೀಪ್ ಕುಮಾರ್ ಆರ್. ಜೈನ್ ಈ ಕುರಿತು ಪ್ರತಿಕ್ರಿಯಿಸಿ, ಗೋಮಾಳ ಜಮೀನನ್ನು 1968ರಿಂದಲೂ ಸಾಗುವಳಿ ಮಾಡುತ್ತಿರುವ ಮಂದಿಗೆ ಖಾತೆ ಮಾಡಿಕೊಟ್ಟಿಲ್ಲ. ಖಾಸಗಿ ಬಿಲ್ಡರ್ ಗಳ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದರು ಎಂದು ಖಾಸಗಿ ವ್ಯಕ್ತಿ ಯೋರ್ವರು ದೂರು ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದೆ ಎಂದರು.

Leave a Reply

Your email address will not be published. Required fields are marked *