ಚಿಕಿತ್ಸೆ ಬಳಿಕ ಕೆಲಸಕ್ಕೆ ಮರಳಿ‍ದ ಅಭಿಷೇಕ್ ಬಚ್ಚನ್

ಮುಂಬೈ, ಆಗಸ್ಟ್ 26  ಚಿತ್ರೀಕರಣದಲ್ಲಿ ಕೈಗೆ ಗಾಯವಾಗಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ನಟ ಅಭಿಷೇಕ್ ಎಂದಿನಂತೆ ತಮ್ಮ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. “ಕಳೆದ ಬುಧವಾರ ನನ್ನ ಹೊಸ ಚಿತ್ರದ ಸೆಟ್‌ನಲ್ಲಿ ಚೆನ್ನೈನಲ್ಲಿ ಸಂಭವಿಸಿದ ಅಪಘಾತದಲ್ಲಿ ನನ್ನ ಬಲಗೈ ಮುರಿತವಾಯಿತು. ಅದನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆಯ ಅಗತ್ಯವಿದ್ದ ಕಾರಣ, ಶಸ್ತ್ರಚಿಕಿತ್ಸೆ ಮಾಡಲಾಯಿತು, ಎಲ್ಲಾ ಪ್ಯಾಚ್-ಅಪ್ ಮತ್ತು ಕ್ಯಾಸ್ಟ್ ಮಾಡಲಾಗಿದೆ” ಎಂದು ಅಭಿಷೇಕ್ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಅವರ ಶಸ್ತ್ರಚಿಕಿತ್ಸೆಯ ನಂತರದ ಫೋಟೋ ಜೊತೆಗೆ ಅಭಿಮಾನಿಗಳ ಹಾರೈಕೆಗೆ ನಟ ಧನ್ಯವಾದ ಅರ್ಪಿಸಿ, ಕೆಲಸಕ್ಕೆ ಮರಳಿದ್ದಾಗಿ ತಿಳಿಸಿದ್ದಾರೆ.
“ಈಗ ಚೆನ್ನೈಗೆ ಮರಳಿ ಕೆಲಸ ಆರಂಭಿಸಿರುವೆ. ಮತ್ತು ನನ್ನ ತಂದೆ ಹೇಳಿದಂತೆ! ಮರ್ದ್ ಕೋ ದರ್ದ್ ನಹಿನ್ ಹೋತಾ! ಸರಿ, ಸರಿ, ಸ್ವಲ್ಪ ನೋವಾಯಿತು. ನಿಮ್ಮೆಲ್ಲರ ಹಾರೈಕೆಗೆ ಧನ್ಯವಾದಗಳು” ಎಂದು ಹೇಳಿದ್ದಾರೆ.ಅಭಿಷೇಕ್ ಇತ್ತೀಚೆಗೆ ಕ್ರೈಮ್ ಥ್ರಿಲ್ಲರ್ “ಬಾಬ್ ಬಿಸ್ವಾಸ್” ಮತ್ತು ಹಾಸ್ಯ ಪ್ರಧಾನ “ದಾಸವಿ” ಚಿತ್ರೀಕರಣದ ಕಾರ್ಯ ಪೂರ್ಣಗೊಳಿಸಿದ್ದಾರೆ.

Leave a Reply

Your email address will not be published. Required fields are marked *