ಯಡಿಯೂರಪ್ಪ ವಿಚಾರದಲ್ಲಿ ಮಠಾಧಿಪತಿಗಳು ಕೈಹಾಕಬಾರದು


ಮೈಸೂರು,ಜು.21 ಕೇಂದ್ರದ ಮೇಲೆ ಯಡಿಯೂರಪ್ಪ ಬೆದರಿಕೆ ಹಾಕುತ್ತಿದ್ದು, ಮಠಾಧಿಪತಿಗಳು ದಯಮಾಡಿ ಇದರಲ್ಲಿ ಕೈ ಹಾಕಬೇಡಿ‌ ಎಂದು ಕನ್ನಡಪರ ಹೋರಾಟಗಾರ ಮಾಜಿ ಶಾಸಕ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್ ಕೆಲ ಶ್ರೀಮಂತ ಮಠಗಳು ಮಾತ್ರ ಯಡಿಯೂರಪ್ಪ ಜೊತೆ ಬಂದಿದ್ದಾರೆ.
ನಿಮ್ಮ ಶ್ರೀಮಂತ ಮಠಗಳು ತಮ್ ಮೆಡಿಕಲ್ ಕಾಲೇಜಿನಲ್ಲಿ ಎಷ್ಟು ಲಿಂಗಾಯತರಿಗೆ, ಬಡವರಿಗೆ ಉಚಿತ ಮೆಡಿಕಲ್ ಸೀಟ್ ಕೊಟ್ಟಿದ್ದೀರಾ ಎಂಬುದನಗನು ಬಹಿರಂಗಪಡಿಸಬೇಕು.
ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ 6 ತಿಂಗಳ ಹಿಂದೆಯೇ ಉಂಟಾಗಿದೆ. ಈಗಂತೂ ತುತ್ತ ತುದಿಗೆ ಬಂದಿದೆ.
ಸಿಎಂ ಬದಲಾವಣೆಗೆ ಒಂದು ವರ್ಗ ಒತ್ತಾಯ ಮಾಡುತ್ತಿದ್ದರೆ,ಯಡಿಯೂರಪ್ಪ ಸಿಎಂ ಆಗಿ ಉಳಿಬೇಕೆಂದೇ ಹೊರಾಟ ಮಾಡುತ್ತಿದ್ದಾರೆ.ಆದರೆ ರಾಜ್ಯದಲ್ಲಿ ಆಡಳಿತ ಕುಸಿದು ಬಿದ್ದಿದೆ. ಆಡಳಿತ ಕುಸಿದಿರುವುದರಿಂದ ಯಡಿಯೂರಪ್ಪಗೆ ಅರ್ಹತೆ ಇಲ್ಲ. ರಾಜ್ಯದ ಹಿತದೃಷ್ಟಿಯಿಂದ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು
ಮೈಸೂರಿನಲ್ಲಿ ವಾಟಾಳ್ ನಾಗರಾಜ್ ಆಗ್ರಹಿಸಿದರು.

ಸಿಎಂ ಪರ ಮಠಾಧೀಶರ ಬ್ಯಾಟಿಂಗ್ ವಿಚಾರವಾಗಿ ಕಿಡಿಕಾರಿದ ವಾಟಾಳ್, ಮಠಾಧೀಶರನ್ನು ದೇವರೇ ಕಾಪಾಡಬೇಕು.
ಯಡಿಯೂರಪ್ಪ ಆಡಳಿತದಲ್ಲಿ ಮಠಗಳನ್ನು ಅಪವಿತ್ರ ಮಾಡಿದ್ದಾರೆ.
ಮಠಗಳಿಗೆ ಐತಿಹಾಸಿಕ ಪರಂಪರೆ ಇದೆ.ಮಠಾಧಿಪತಿಗಳು ಎಂದಿಗೂ ರಾಜಕೀಯಕ್ಕಾಗಿ ಬೀದಿಗೆ ಬಂದಿರಲಿಲ್ಲ.ಆದರೆ ಯಡಿಯೂರಪ್ಪ ಆಡಳಿತದಲ್ಲಿ ಮಠಗಳನ್ನು ಅಪವಿತ್ರ ಮಾಡಿದ್ದಾರೆ.ವೀರಶೈವ ತತ್ವ ಸಿದ್ದಾಂತ ಇಡೀ ಸಮಾಜಕ್ಕೆ ದಾರಿದೀಪ.
ಮಠಗಳನ್ನು ಯಡಿಯೂರಪ್ಪ ಕತ್ತಲೆಯಲ್ಲಿ ಇಡುತ್ತಿದ್ದಾರೆ.
ಹಿಂದಿನ ಮುಖ್ಯಮಂತ್ರಿಗಳು ಯಾವತ್ತೂ ಮಠಗಳನ್ನು ಸೇರಿಸಿಕೊಳ್ಳಲಿಲ್ಲ.ಆದರೆ ಯಡಿಯೂರಪ್ಪ ಅಧಿಕಾರಕ್ಕೆ ಬಂದಿದ್ದು, ಆಡಳಿತ ನಡೆಸುತ್ತಿರುವುದು ಎಲ್ಲವೂ ಅಪವಿತ್ರ ಎಂದು ವಾಟಾಳ್ ನಾಗರಾಜ್ ಹೇಳಿದರು.

,

Leave a Reply

Your email address will not be published. Required fields are marked *