ಗುಜರಾತ್‌ನ ಕಛ್ ಜಿಲ್ಲೆಯ ಅಂಜಾರ್‌ನಲ್ಲಿ ಸಿಆರ್‌ಪಿಎಫ್ ಯೋಧನೊಬ್ಬ ಪ್ರಿಯತಮೆಯನ್ನು ಕೊಂದು ಪೊಲೀಸರಿಗೆ ಶರಣಾಗಿದ್ದಾನೆ. ಕೊಲೆಯಾದ ಮಹಿಳೆಯನ್ನು ಅರುಣಾಬೆನ್ ನಟುಭಾಯಿ ಜಾದವ್ (25) ಎಂದು ಗುರುತಿಸಲಾಗಿದೆ.
ಹತ್ಯೆಯಾದ ಮಹಿಳೆ ಅಂಜಾರ್ ಪೊಲೀಸ್ ಠಾಣೆಯಲ್ಲಿ ಸಹಾಯಕ ಸಬ್-ಇನ್ಸ್‌ಪೆಕ್ಟರ್ (ಎಎಸ್‌ಐ) ಆಗಿ ಕೆಲಸ ಮಾಡುತ್ತಿದ್ದರು. ಕೊಲೆ ಆರೋಪಿಯು ದಿಲೀಪ್ ಡಾಂಗ್ಚಿಯಾ ಸಿಆರ್‌ಪಿಎಫ್ ಯೋಧನಾಗಿದ್ದು, ಮಣಿಪುರದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ.
ಇಬ್ಬರೂ ಹಲವು ವರ್ಷಗಳಿಂದ ಲಿವ್ ಇನ್‌ನಲ್ಲಿದ್ದರು. ಕೊಲೆ ಮಾಡಿದ ಬಳಿಕ ಆರೋಪಿ ಆಕೆ ಕೆಲಸ ಮಾಡುತ್ತಿದ್ದ ಅಂಜಾರ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ರಾತ್ರಿ ಅರುಣಾಬೆನ್ ಮತ್ತು ಆರೋಪಿ ಮನೆಯಲ್ಲಿ ಜಗಳವಾಡಿದ್ದಾರೆ, ಈ ಸಮಯದಲ್ಲಿ ತಾಯಿಯ ಬಗ್ಗೆ ಅವಹೇಳನಕಾರಿ ಮಾತಾಡಿದ್ದಕ್ಕೆ ಕೊಲೆ ಮಾಡಿರುವುದಾಗಿ ಆರೋಪಿ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.
2021ರಲ್ಲಿ ಇನ್ಸ್ಟಾಗ್ರಾಮ್ ಮೂಲಕ ಇಬ್ಬರು ಪರಿಚಯ ಆಗಿದ್ದರು. ಬಳಿಕ ಒಟ್ಟಿಗೆ ವಾಸವಾಗಿದ್ದು, ಮದುವೆಯಾಗಲು ನಿರ್ಧರಿಸಿದ್ದರು ಎನ್ನಲಾಗಿದೆ.