ಶೇಕಡ 90ರಷ್ಟು ಆಪ್ ಗಳು 2021 ರಲ್ಲಿ ಸೈಬರ್ ದಾಳಿಗೆ ತುತ್ತಾಗುವ ಸಾಧ್ಯತೆ


ಬೆಂಗಳೂರು, ಜ.14 (ಯುಎನ್ಐ) ಶೇಕಡ 90 ರಷ್ಟು ವೆಬ್ ಆಧಾರಿತ ಅಪ್ಲಿಕೇಶನ್ ಗಳು 2021 ರಲ್ಲಿ ಸೈಬರ್ ದಾಳಿಗೆ ತುತ್ತಾಗುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಅಪ್ಲಿಕೇಶನ್ ಪ್ರೋಗ್ರಾಮ್ ಇಂಟತಗ ಫೇಸ್ ನಲ್ಲಿರುವ ನ್ಯೂನತೆ ಎಂದು ಸೈಬರ್ ಸೆಕ್ಯೂರಿಟಿ ಸಂಸ್ಥೆ ಹೇಳಿದೆ.
2020 ರಲ್ಲಿ ಶೇಕಡ 40 ರಷ್ಟು ಅಪ್ಲಿಕೇಶನ್ ಗಳು ಈ ರೀತಿ ದಾಳಿಗೆ ತುತ್ತಾಗುವ ಸಾಧ್ಯತೆಯನ್ನು ಹೊಂದಿದ್ದವು. ಆದರೆ ಈ ವರ್ಷ ಈ ರೀತಿ ದಾಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಲಿದೆ ಎಂದು ಅಭಿಪ್ರಾಯ ಪಟ್ಟಿದೆ.
ಈ ನಿಟ್ಟಿನಲ್ಲಿ ಸಂಸ್ಥೆಗಳು ಅಪ್ಲಿಕೇಶನ್ ಪ್ರೋಗ್ರಾಮ್ ಇಂಟರ್ ಫೇಸ್ (ಎಪಿಐ) ಮತ್ತು ನೆಕ್ಸ್ಟ್ ಜನರೇಷನ್ ವೆಬ್ ಅಪ್ಲಿಕೇಶನ್ ಫೈರ್ವಾಲ್ (ಎನ್ಜಿ-ಡಬ್ಲ್ಯೂಎಫ್) ಮೇಲೆ ಹೂಡಿಕೆ ಮಾಡಲು ಪ್ರಾರಂಭಿಸಿವೆ. ಐಟಿ ಸೆಕ್ಯೂರಿಟಿ ಮತ್ತು ಡೆಟಾ ಸುರಕ್ಷತೆಗೆ ಪರಿಹಾರ ಒದಗಿಸುವಲ್ಲಿ ಮುಂಚೂಣಿಯಲ್ಲಿರುವ ಹೆಸರಾಂತ ಕ್ವಿಕ್ ಹೀಲ್ ಟೆಕ್ನಾಲಜಿಸ್ ಲಿಮಿಟೆಡ್ ಸಂಸ್ಥೆಯು ಎಲ್ 7 ಡಿಫೆನ್ಸ್ ಸಂಸ್ಥೆಯಲ್ಲಿ 2 ದಶಲಕ್ಷ ಡಾಲರ್ ಹೂಡಿಕೆ ಮಾಡಿದೆ. ಗ್ರಾಹಕರು ತಮ್ಮ ಅಪ್ಲಿಕೇಶನ್ ಗಳನ್ನು ಸುರಕ್ಷಿತವಾಗಿಸುವ ನಿಟ್ಟಿನಲ್ಲಿ ಎಲ್ 7 ಡಿಫೆನ್ಸ್ ಸಂಸ್ಥೆಯು ಸೇವೆ ಒದಗಿಸುತ್ತದೆ. ಅಪ್ಲಿಕೇಶನ್ ಪ್ರೋಗ್ರಾಮ್ ಇಂಟರ್ಫೇಸ್ (ಎಪಿಐ) ನ ಡಿಸ್ಟ್ರಿಬ್ಯೂಟೆಡ್ ಡೆನಿಯಲ್ ಆಫ್ ಸರ್ವಿಸಸ್ (ಡಿಡಿಒಎಸ್), ಬಿಒಟಿ ಮತ್ತು ಇತರ ವೈರಸ್ ದಾಳಿಗಳಿಂದ ಕೃತಕ ಬುದ್ದಿವಂತಿಕೆ ಆಧಾರಿತ ಎಮ್ಮೂನ್ ಟೆಕ್ನಾಲಜಿ ಹೊಂದಿದ ಎಲ್ 7 ಡಿಫೆನ್ಸ್ ಸಂಸ್ಥೆಯು ರಕ್ಷಿಸುತ್ತದೆ.
ಯುಸ್ ಮತ್ತು ಯುರೋಪ್ ನಲ್ಲಿ ಫೈನಾನ್ಸಿಯಲ್ ಮತ್ತು ಐಟಿ ಕ್ಷೇತ್ರಗಳಲ್ಲಿನ ಗ್ರಾಹಕರನ್ನು ಈಗಾಗಲೇ ಎಲ್7 ಡಿಫೆನ್ಸ್ ಸಂಸ್ಥೆ ಸೆಳೆದಿದೆ. ಎಲ್7 ಡಿಫೆನ್ಸ್ ಮತ್ತು ಕ್ವಿಕ್ ಹೀಲ್ ಟೆಕ್ನಾಲಜಿಸ್ ಲಿಮಿಟೆಡ್ ನಡುವಿನ ಸಹಭಾಗಿತ್ವದಿಂದಾಗಿ ಐಟಿ ಕ್ಷೇತ್ರಕ್ಕೆ ಸಂಬಂಧಿಸಿದ ಮತ್ತಷ್ಟು ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು ಸಹಕಾರಿಯಾಗಲಿದೆ.
“ನಮ್ಮ ಗ್ರಾಹಕರ ಡಿಜಿಟಲ್ ರೂಪಾಂತರ ಪ್ರಯಾಣದ ನಿಟ್ಟಿನಲ್ಲಿ ಒಳ್ಳೆ ಕಡೆ ಹೂಡಿಕೆ ಮಾಡವ ಅವಕಾಶಕ್ಕಾಗಿ ಕ್ವಿಕ್ ಹೀಲ್ ಸದಾ ಕಾತುರದಿಂದ ನೋಡುತ್ತಿರುತ್ತದೆ. ಎಪಿಐ ಸುರಕ್ಷತೆ ಮತ್ತು ಎನ್ಜಿ-ಡಬ್ಲ್ಯೂಎಎಫ್ ಕ್ಷೇತ್ರದಲ್ಲಿ ಎಲ್7 ಡಿಫೈನ್ಸ್ ಪರಿಣತಿ ಹೊಂದಿದ್ದು ಇದು ನಮ್ಮನ್ನು ಹೂಡಿಕೆ ಮಾಡಲು ಪ್ರೇರೆಪಿಸಿತು. ಅಪ್ಲಿಕೇಶನ್ ಸುರಕ್ಷತೆ ಕ್ಷೇತ್ರದಲ್ಲಿ ಸೆಕ್ರೈಟ್ ಪಾದಾರ್ಪಣೆ ಮಾಡಿ ನೆಕ್ಸ್ಟ್ ಜನರೆಷನ್ ಸೈಬರ್ ದಾಳಿಯಿಂದ ಸುರಕ್ಷತೆ ಪಡೆಯಲು ಈ ಸಹಭಾಗಿತ್ವ ಸಹಕಾರಿ” ಎಂದು ಕ್ವಿಕ್ ಹೀಲ್ ಟೆಕ್ನಾಲಜಿಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಚೀಫ್ ಎಕ್ಸಿಕ್ಯೂಟಿವ್ ಆಫಿಸರ್ ಡಾ ಕೈಲಾಶ್ ಕಾಕ್ಟರ್ ಹೇಳಿದರು.
“ಕ್ವಿಕ್ ಹೀಲ್ ಟೆಕ್ನಾಲಜಿಸ್ ಸಂಸ್ಥೆ ಜತೆಗೆ ನಮ್ಮ ಭಾಂದವ್ಯವನ್ನು ಗಟ್ಟಿಗೊಳಸಲು ನಮಗೆ ಅತೀವ ಸಂತಸವಾಗುತ್ತಿದೆ. ಈ ಸಹಭಾಗಿತ್ವದಿಂದಾಗಿ ಮಾರುಕಟ್ಟೆಯಲ್ಲಿ ನಾವು ಮತ್ತಷ್ಟು ಗುರುತಿಸಿಕೊಳ್ಳಬಹುದಾಗಿದೆ. ಕ್ವಿಕ್ ಹೀಲ್ ಸಂಸ್ಥೆಯಿಂದ ಬೆಂಬಲ ಪಡೆಯಲು ನಮಗೆ ಅತೀವ ಸಂತಸವಾಗುತತಿದೆ. ಮಾರುಕಟ್ಟೆಯಲ್ಲಿ ಎಪಿಐ ಸುರಕ್ಷತೆ ಒದಗಿಸುವ ನಾಯಕ ಎನ್ನುವ ಹೆಸರು ಗಳಿಸಲು ಈ ಸಹಭಾಗಿತ್ವ ಸಹಕಾರಿ” ಎಂದು ಎಲ್ 7 ಡಿಫೆನ್ಸ್ ಸಂಸ್ಥೆಯ ಸಹ ಸಂಸ್ಥಾಪಕ ವೈಇಸ್ರೆಲ್ ಗ್ರಾಸ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *