ನದಿಗೆ ಬಿದ್ದ ವಾಹನ; 9 ಮಂದಿ ಸಾವು, ಓರ್ವ ಮಹಿಳೆಯ ರಕ್ಷಣೆ
ನೈನಿತಾಲ್:ಜುಲೈ 08 ಉತ್ತರಾಖಂಡದ ರಾಮನಗರದಲ್ಲಿ ಧೇಲಾ ನದಿಗೆ ವಾಹನ ಬಿದ್ದು ಪಂಜಾಬ್ನ ಒಂಬತ್ತು ಪ್ರವಾಸಿಗರು ಮುಳುಗಿ ಸಾವನ್ನಪ್ಪಿದ್ದಾರೆ. ನೀರಿನ ರಭಸಕ್ಕೆ ಅವರು ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಟಿಯಾಲ ನಿವಾಸಿಗಳಾದ ಪ್ರವಾಸಿಗರೆಲ್ಲರೂ ಪಂಜಾಬ್ಗೆ ಹಿಂತಿರುಗುತ್ತಿದ್ದಾಗ ಬೆಳಿಗ್ಗೆ 5:45 ರ ಸುಮಾರಿಗೆ ಅಪಘಾತ ಸಂಭವಿಸಿದೆ. ನಾಲ್ಕು ಶವಗಳನ್ನು ಹೊರತೆಗೆಯಲಾಗಿದ್ದು, ಐವರು ಇನ್ನೂ ವಾಹನದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಇಂದು ಬೆಳಗ್ಗೆ ಸುರಿದ ಭಾರೀ ಮಳೆಯಿಂದ ನದಿ ನೀರಿನ ಹರಿವು ಜೋರಾಗಿತ್ತು. ಈ ವೇಳೆ ನದಿ ನೀರು ಹರಿಯುತ್ತಿದ್ದ ಬ್ರಿಡ್ಜ್ ಮೇಲೆ ವಾಹನ ಬಂದಿದ್ದು ನೀರಿನ ರಭಸಕ್ಕೆ ದುರಂತ ಸಂಭವಿಸಿದೆ. ನಾಜಿಯಾ ಎಂದು ಗುರುತಿಸಲಾದ 22 ವರ್ಷದ ಮಹಿಳೆಯನ್ನು ವಾಹನದಿಂದ ಜೀವಂತವಾಗಿ ರಕ್ಷಿಸಲಾಗಿದೆ. ಆಕೆಯನ್ನು ರಾಮನಗರ ಆಸ್ಪತ್ರೆಗೆ ಕಳುಹಿಸಲಾಗಿದೆ. 10 ಪ್ರವಾಸಿಗರು ಧೇಲಾದಲ್ಲಿನ ರೆಸಾರ್ಟ್ನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.