ಕೊರೋನ ಸೋಂಕಿಗೆ 24 ಗಂಟೆಯಲ್ಲಿ 496 ರೋಗಿಗಳ ಸಾವು

ನವದೆಹಲಿ , ಆಗಸ್ಟ್ 27  ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 44,ಸಾವಿರದ 658 ಕೊರೋನ ಪ್ರಕರಣಗಳು ವರದಿಯಾಗಿದ್ದು, ಇದೇ ವೇಳೆ ಚಿಕಿತ್ಸೆ ಫಲಕಾರಿಯಾಗದೇ 496 ರೋಗಿಗಳು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ನಿನ್ನೆಯವರೆಗೆ ದೇಶದಲ್ಲಿ ಪರೀಕ್ಷಿಸಲಾದ ಒಟ್ಟು ಮಾದರಿಗಳ ಸಂಖ್ಯೆ 51,49,54,309 ಆಗಿದೆ. ದೇಶದಲ್ಲಿ ಈವರೆಗೆ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 4 ಲಕ್ಷದ 36ಸಾವಿರಕ್ಕೆ ಏರಿಕೆಯಾಗಿದೆ.
ಕಳೆದ ವರ್ಷದ ಡಿಸೆಂಬರ್ 9 ಕೊರೋನಾ ಸೊಂಕಿತರ ಒಂದು ಕೋಟಿ ದಾಟಿತ್ತು. ಮೇ 4 ರಂದು ರಂದು ಎರಡು ಕೋಟಿ ಮತ್ತು ಜೂನ್ 23 ರಂದು ಮೂರು ಕೋಟಿ ದಾಟಿತ್ತು ಎಂದೂ ಇಲಾಖೆ ವರದಿ ಹೇಳಿದೆ. ದೇಶದಲ್ಲಿ ಕೊರೋನ ಚೇತರಿಕೆ ಪ್ರಮಾಣ ಶೇಕಡ 97 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

,

Leave a Reply

Your email address will not be published. Required fields are marked *