ಗುಂಜಾನಟ್ಟಿ ಗ್ರಾಮದಲ್ಲಿ 366 ಕೆಜಿ ಗಾಂಜಾ ನಾಶ ಕಾಕತಿ ಪೊಲೀಸ್ ವ್ಯಾಪ್ತಿಯಲ್ಲಿ ಘಟನೆ.!

ಗುಂಜಾನಟ್ಟಿ ಗ್ರಾಮದಲ್ಲಿ 366 ಕೆಜಿ ಗಾಂಜಾ ನಾಶ ಕಾಕತಿ ಪೊಲೀಸ್ ವ್ಯಾಪ್ತಿಯಲ್ಲಿ ಘಟನೆ.!

 

ಬೆಳಗಾವಿ: ಸುಮಾರು ಎರಡು ವರ್ಷಗಳಿಂದ ದಾಖಲಾಗಿರುವ 77 ಗಾಂಜಾ ಕೇಸ್ ಅಡಿಯಲ್ಲಿ ಸೀಜ್ ಮಾಡಿರುವ 366 ಕೆಜಿ ಗಾಂಜಾವನ್ನು ಇಂದು ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯ ಗುಂಜಾನಟ್ಟಿ ಗ್ರಾಮದಲ್ಲಿ ನಾಶ ಪಡಿಸಲಾಗಿದೆ. ‌
ನಗರ ಪೊಲೀಸ್ ಆಯುಕ್ತ ಡಾ. ಕೆ. ತ್ಯಾಗರಾಜನ್ ಅವರ ಮಾರ್ಗದರ್ಶನದಲ್ಲಿ ಅಪರಾಧ ವಿಭಾಗದ ಡಿಸಿಪಿ ಡಾ. ವಿಕ್ರಮ ಅಮಟೆ ಅವರ ತಂಡ ಈ  ಗಾಂಜಾ ನಾಶ ಪಡಿಸುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು. ‌ಕಾಕತಿ ಬಳಿ ಇರುವ ಹುಂಜಾನಟ್ಟಿ ಗ್ರಾಮದಲ್ಲಿ ಜೆಸಿಪಿಯಿಂದ ಗುಂಡಿ ತೊಡಿ ಸೀಜ್ ಮಾಡಲಾಗಿದ್ದ 366 ಕೆಜಿ ಗಾಂಜಾವನ್ನು ಸುಟ್ಟು ನಾಶ ಪಡಿಸಲಾಗಿದೆ.‌ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಗುಂಜಾನಟ್ಟಿ ಗ್ರಾಮದಲ್ಲಿ ನಗರ ಪೊಲೀಸ್  ವ್ಯಾಪ್ತಿಯಲ್ಲಿ ಎರಡು ವರ್ಷಗಳಿಂದ ಸೀಜ್ ಆಗಿದ್ದ ಗಾಂಜಾ ನಾಶ ಪಡಿಸಲಾಗಿದೆ ಎಂದು ತಿಳಿಸಿದರು. ಈ ಕುರಿತು ಕೇಸ್ ಸಹ ರೆಜಿಸ್ಟರ್ ಮಾಡಲಾಗಿರುತ್ತದೆ ಆ ಗಾಂಜಾವನ್ನು ಎಲ್ಲಾ ರೀತಿಯ ನಿಯಮಗ ಅನುಸಾರ ಹಾಗೂ ನ್ಯಾಯಾಲಯದ ಅನುಮತಿ ಪಡೆದುಕೊಂಡ ಪಲ್ಯೂಶನ್ ಬೋರ್ಡ್ ಅನುಮತಿ ಪಡೆದು ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯ ಗುಂಜಾನಟ್ಟಿಯಲ್ಲಿ ನಾಶ ಪಡಿಸಲಾಗಿದೆ. ಗಾಂಜಾಗೆ ಸಂಬಂಧಿಸಿದ 77 ಕೇಸ್ ಗಳಲ್ಲಿ 366 ಕೆಜಿ ಗಾಂಜಾ ಸೀಜ್ ಮಾಡಲಾಗಿತ್ತು ಎಂದು ತಿಳಿಸಿದರು. ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಅದನ್ನು ಬೆರೆ ಸಮಯದಲ್ಲಿ ನಾಶ ಪಡಿಸಲಾಗುತ್ತದೆ. ನಗರ ಪೊಲೀಸ್ ಆಯುಕ್ತ ಮಾರ್ಗದರ್ಶನದಲ್ಲಿ ಡಿಸಿಪಿ ಕ್ರೈಂ ಅವರ ತಂಡ ಈ ಕಾರ್ಯಾಚರಣೆಯಲ್ಲಿ ಭಾಗಿ ಯಾಗಿದೆ ಎಂದು ಅವರು ತಿಳಿಸಿದರು.

Leave a Reply

Your email address will not be published. Required fields are marked *