ಕರ್ನಾಟಕ, ತಮಿಳುನಾಡು ರೈತರಿಂದ 25 ಕೋಟಿ ರೂ ಮೊತ್ತದ ಕೊಬ್ಬರಿ ಖರೀದಿ

ಕರ್ನಾಟಕ, ತಮಿಳುನಾಡು ರೈತರಿಂದ 25 ಕೋಟಿ ರೂ ಮೊತ್ತದ ಕೊಬ್ಬರಿ ಖರೀದಿ

ನವದೆಹಲಿ, ಅ 12 ಕನಿಷ್ಠ ಬೆಂಬಲ ಬೆಲೆ – ಎಂ.ಎಸ್.ಪಿ ಯೋಜನೆಯಡಿ ಕರ್ನಾಟಕ ಮತ್ತು ತಮಿಳುನಾಡಿನ 3,961 ರೈತರಿಂದ 25.40 ಕೋಟಿ ರೂ ಮೊತ್ತದ 5,089 ಮೆಟ್ರಿಕ್ ಟನ್ ಕೊಬ್ಬರಿ ಖರೀದಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಆಂಧ್ರಪದೇಶದಿಂದ 1.23 ಲಕ್ಷ ಮೆಟ್ರಿಕ್ ಟನ್ ಕೊಬ್ಬರಿ ಖರೀದಿಗೆ ಅನುಮೋದನೆ ನೀಡಲಾಗಿದೆ. ವಿವಿಧ ನೋಡಲ್ ಏಜೆನ್ಸಿಗಳ ಮೂಲಕ ಶನಿವಾರದವರೆಗೆ 460 ಮೆಟ್ರಿಕ್ ಟನ್ ಹೆಸರುಕಾಳು ಖರೀದಿಸಲಾಗಿದೆ.

ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ, ಖರೀದಿ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಮುಂದುವರಿಸಿದೆ. ಹೆಚ್ಚಿನ ಪ್ರಮಾಣದಲ್ಲಿ ಭತ್ತ ಖರೀದಿಯಾಗುತ್ತಿದ್ದು, ಕೆಲ ಹೊಸ ರಾಜ್ಯಗಳು ಸಹ ಈ ಎಂ.ಎಸ್.ಪಿ ವ್ಯಾಪ್ತಿಗೆ ಸೇರ್ಪಡೆಯಾಗಿವೆ.

3.22 ಲಕ್ಷ ರೈತರಿಂದ 7,159 ಕೋಟಿ ರೂಪಾಯಿ ಮೊತ್ತದ 38 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಸಲಾಗಿದೆ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಗುಜರಾತ್, ಉತ್ತರಪ್ರದೇಶ, ಒಡಿಶಾ ಮತ್ತು ಆಂಧ್ರಪ್ರದೇಶ ರಾಜ್ಯಗಳಿಂದ ೩೦ ಲಕ್ಷದ ೭೦ ಸಾವಿರ ಮೆಟ್ರಿಕ್ ಟನ್ ಬೇಳೆಕಾಳುಗಳು ಮತ್ತು ಎಣ್ಣೆ ಬೀಜಗಳನ್ನು ಖರೀದಿಸಲು ಅನುಮೋದನೆ ನೀಡಲಾಗಿದೆ.

Leave a Reply

Your email address will not be published. Required fields are marked *