ಬಡ ರಾಷ್ಟ್ರಗಳಿಗೆ ಜಿ-7 ಒಕ್ಕೂಟ ರಾಷ್ಟ್ರಗಳಿಂದ 100 ಕೋಟಿ ಕೋವಿಡ್ ಲಸಿಕೆ

ಬಡ ರಾಷ್ಟ್ರಗಳಿಗೆ ಜಿ-7 ಒಕ್ಕೂಟ ರಾಷ್ಟ್ರಗಳಿಂದ 100 ಕೋಟಿ ಕೋವಿಡ್ ಲಸಿಕೆ

ಲಂಡನ್‍, ಜೂನ್‍ 11 – ವಿಶ್ವದ ಶ್ರೀಮಂತ ರಾಷ್ಟ್ರಗಳನ್ನೊಳಗೊಂಡ ಜಿ-7 ಒಕ್ಕೂಟ ಮುಂದಿನ ದಿನಗಳಲ್ಲಿ ಬಡ ರಾಷ್ಟ್ರಗಳಿಗೆ 100 ಕೋಟಿ ಲಸಿಕೆಗಳನ್ನು ನೀಡಲು ಒಪ್ಪಿವೆ ಎಂದು ಜಿ-7 ಶೃಂಗಸಭೆಯನ್ನು ಆಯೋಜಿಸಿರುವ ಬ್ರಿಟನ್‍ ಹೇಳಿದೆ.
ಯೋಜನೆಯ ಕಾರ್ಯಗತ ಕುರಿತು ಶೃಂಗಸಭೆಯಲ್ಲಿ ಚರ್ಚಿಸಲಾಗುವುದು. ಬಡ ರಾಷ್ಟ್ರಗಳಿಗೆ 100 ಕೋಟಿ ಲಸಿಕೆ ನೀಡುವ ಕಾರ್ಯ ಯೋಜನೆ ಬಗ್ಗೆ ಶೃಂಗಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಮೂರು ದಿನಗಳ ಶೃಂಗಸಭೆಗೂ ಮುನ್ನ ಕಾರ್ಬಿಸ್ ಬೇ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, 2022ರ ವೇಳೆಗೆ ಇಡೀ ವಿಶ್ವಕ್ಕೆ ಕೋವಿಡ್ ಲಸಿಕೆ ಹಾಕಿಸುವುದಕ್ಕೆ ಶ್ರಿಮಂತ ರಾಷ್ಟ್ರಗಳು ಒಪ್ಪಿಗೆ ನೀಡಿವೆ. ಇಡೀ ಮನುಕುಲಕ್ಕೆ ಕಂಟಕವಾಗಿರುವ ಈ ಸಾಂಕ್ರಾಮಿಕವನ್ನು ಎಲ್ಲ ದೇಶಗಳು ಒಟ್ಟುಗೂಡಿ ಎದುರಿಸಬೇಕಾಗಿದೆ ಎಂದು ಹೇಳಿದ್ದಾರೆ.

,

Leave a Reply

Your email address will not be published. Required fields are marked *