ಕಲಬುರಗಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ 1 ವೆಂಟಿಲೇಟರ್, 3 ಆಕ್ಸಿಜನ್ ಕನ್ಸನ್ ಟ್ರೇಟರ್ ಹಂಚಿಕೆ

ಕಲಬುರಗಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ 1 ವೆಂಟಿಲೇಟರ್, 3 ಆಕ್ಸಿಜನ್ ಕನ್ಸನ್ ಟ್ರೇಟರ್ ಹಂಚಿಕೆ


ಕಲಬುರಗಿ, ಮೇ.15  ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕರ್ನಾಟಕ ಶಾಖೆಯಿಂದ ಕಲಬುರಗಿ ಜಿಲ್ಲೆಗೆ ಹಂಚಿಕೆಯಾದ 
18 ಲಕ್ಷ ರೂ. ಮೌಲ್ಯದ 1 ವೆಂಟಿಲೇಟರ್, 3 ಆಕ್ಸಿಜನ್ ಕನ್ಸನ್ ಟ್ರೇಟರ್ ಗಳನ್ನು ಕಲಬುರಗಿ‌ ಜಿಲ್ಲಾ ರೆಡ್ ಕ್ರಾಸ್ 
ಸಂಸ್ಥೆಯ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಶನಿವಾರ ಇವುಗಳನ್ನು ಸರ್ಕಾರಿ‌ ಆಸ್ಪತ್ರೆಗಳಲ್ಲಿ ರೋಗಿಗಳ 

ಚಿಕಿತ್ಸೆಗೆ ಬಳಸುವಂತೆ ಡಿ.ಹೆಚ್.ಓ ಡಾ.ಶರಣಬಸಪ್ಪ ಗಣಜಲಖೇಡ್ ಅವರಿಗೆ ನೀಡಿದರು.
ಈ ವೈದ್ಯಕೀಯ ಜೀವರಕ್ಷಕ ಉಪಕರಣಗಳು ವಿದೇಶಗಳಿಂದ ರಾಜ್ಯಕ್ಕೆ ಕೊಡುಗೆಯಾಗಿ‌ ಬಂದಿದೆ.

ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಲಬುರಗಿ ಜಿಲ್ಲಾ ಘಟಕದ ಉಪಸಭಾಪತಿ ಅರುಣ ಲೋಯಾ, ಕೋಶಾಧಿಕಾರಿ
 ಭಾಗ್ಯಲಕ್ಷ್ಮಿ, ಆಡಳಿತ ಮಂಡಳಿ ಸದಸ್ಯ ಡಾ.ಶರಣಬಸಪ್ಪ ವಡ್ಡನಕೇರಿ, ಆರಾಧನಾ‌ ವಿಶ್ವನಾಥ ರೆಡ್ಡಿ ಮುದ್ನಾಳ ಕಾಲೇಜಿನ 
ಯುವ ರೆಡ್ ಕ್ರಾಸ್ ಕಾರ್ಯಕ್ರಮಾಧಿಕಾರಿಗಳು ಉಪಸ್ಥಿತರಿದ್ದರು.
, , ,

Leave a Reply

Your email address will not be published. Required fields are marked *