ಆರ್ಥಿಕ ಹಿಂಜರಿತವೇ ಸರ್ಕಾರದ ಮುಂದಿರುವ ಬಹು ದೊಡ್ಡ ಸವಾಲು

ಬೆಂಗಳೂರು:- ಕೊರೋನಾಗಿಂತ ಜನಸಾಮಾನ್ಯರ ಆರ್ಥಿಕ ಹಿಂಜರಿತವೇ ಸರ್ಕಾರದ ಮುಂದಿರುವ ಬಹು ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಲಾಕ್ ಡೌನ್ ಸಮಸ್ಯೆ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನೇ ಬುಡಮೇಲು ಮಾಡಿದೆ. ಆರ್ಥಿಕ ಸಂಕಷ್ಟದಿಂದ ಹೊರಬರುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ರಾಜ್ಯ ಸರ್ಕಾರ ಆರ್ಥಿಕ ಇಂಜರಿತದಿಂದ ಹೊರಬರಬೇಕೆಂದರೆ ಕೇಂದ್ರದ ನೆರವಿಗಾಗಿ ಜಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ ಕೇಂದ್ರದ ಪರಿಸ್ಥಿತಿ ಕೂಡ ಭಿನ್ನವಾಗಿಲ್ಲ. ಕೇಂದ್ರ ಸರ್ಕಾರವೇ ಬೊಕ್ಕಸ ತುಂಬಿಸಿಕೊಳ್ಳಲು ಹರಸಾಹಸ ಪಡುತ್ತಿದೆ. ಸರ್ಕಾರದ ಯೋಜನೆಗಳನ್ನೊಲ್ಲಾ ಮುಂದೂಡದೇ ಬೇರೆ ದಾರಿಯೇ ಇಲ್ಲದಂತಾಗಿದೆ.
ರಾಜ್ಯ ಸರ್ಕಾರಿ ನೌಕರಿರಿಗೆ ವಾರ್ಷಿಕ 33,611 ಕೋಟಿ ರೂಪಾಯಿ ಅಗತ್ಯವಿದೆ. ಅಲ್ಲದೇ ದಿನಗೂಲಿ ನೌಕರರು ಹಾಗೂ ಹೊರಗುತ್ತಿಗೆ ನೌಕರರ ಸಂಬಲಕ್ಕೆ 1,034 ಕೋಟಿ ರೂಪಾಯಿ ವೆಚ್ಚ ತಗುಲಲಿದೆ. ಇನ್ನೂ ನಿವೃತ್ತಿ ವೇತನದಾರರಿಗೆ 19,555 ಕೋಟಿ ರೂಪಾಯಿ ತೆಗೆದಿರಿಸಬೇಕಿದೆ. ಇನ್ನೂ ಮುಖ್ಯಮಂತ್ರಿಗಳು ಸಹ ಬಜೆಟ್ ನಲ್ಲಿ ಘೋಷಣೆಯಾಗಿರುವ ಯೋಜನೆಗಳನ್ಮು ಆರು ತಿಂಗಳು ಮುಂದೂಡಿದ್ದಾರೆ.
ಸರ್ಕಾರಕ್ಕೆ ಸಂಪನ್ಮೂಲ ಮಾಡುವುದೇ ಬಹು ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೈಗಾರಿಕೆಗಳು ಮತ್ತೆ ಚಾಲನೆ ದೊರೆಯಬೇಕು. ಉದ್ಯೋಗಸ್ಥರಿಗೆ ಲಾಕ್ ಡೌನ್ ವೇಳೆ ಸಂಬಲ ನೀಡಲಾಗದೇ ಹಲವು ಕೈಗಾರಿಕೆಗಳು ತತ್ತರಿಸುತ್ತಿದೆ. ಇನ್ನೂ ಆರ್ಬಿಐ ಬ್ಯಾಂಕ್ ಗಳ ಸಾಲದ ಮರುಪಾವತಿ ಕಂತನ್ನು ಮೂರು ತಿಂಗಳು ಮುಂದೂಡಿತ್ತು. ಆದರೆ ಜನಸಾಮಾನ್ಯರ ಬ್ಯಾಂಕ್ ಖಾತೆಯಿಂದ ಸಾಲದ ಇಒಂಐ ಮಾತ್ರ ಕಡಿತಗೋಳ್ಳುತ್ತಿರುವುದು ಆತಂಕ ಮೂಡಿಸಿದೆ. ಟ್ಯಾಕ್ಸಿ ಚಾಲಕರು, ದಿನಗೂಲಿ ನೌಕರರಂತು ಒಂದು ಒತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ತಾವು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ತರಲಾಗುತ್ತಿಲ್ಲ. ಇದರಿಂದ ಬೇಸತ್ತು ರೈತರು ತಾವು ಬೆಳೆದ ಬೆಳೆಗಳನ್ನು ಕೆರೆಗೆ ಎಸೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಈ ಬಗ್ಗೆ ಎಚ್ಚೆತ್ತ ಸರ್ಕಾರ ಕೆಲವು ದಿನಗಳಿಂದ ರೈತರು ತಾವು ಬೆಳೆದ ಬೆಳೆಗಳನ್ನು ಮಾರಲು ಹಲವು ಕ್ರಮಗಳನ್ನು ಜಾರಿಗೆ ತಂದಿದ್ದಾರೆ.
ಪರಿಸ್ಥಿತಿ ಹೀಗೆ ಮುಂದುವರಿದರೆ ಸದ್ಯಕ್ಕೆ 2020-21ನೇ ಸಾಲಿನ ಅಂತ್ಯಕ್ಕೆ ಸರ್ಕಾರದ ಸಾಲ 3,68,692 ಕೋಟಿ ರೂಪಾಯಿ ತಲುಪಲಿದೆ ಎನ್ನಲಾಗುತ್ತಿದೆ. ಹೀಗಾಗಿ ದುಂದು ವೆಚ್ಚಕ್ಕೆ ಬ್ರೇಕ್ ಹಾಕಿ ಅಗತ್ಯ ವಸ್ತುಗಳು ಹಾಗೂ ತುರ್ತು ಯೋಜನೆಗಳಿಗೆ ಮಾತ್ರ ಗಮನ ಹರಿಸಿದರೆ ಮಾತ್ರ ಮುಂದಿನ ಸಂಕಷ್ಟದ ದಿನಗಳನ್ನು ಎದುರಿಸುವಲ್ಲಿ ಯಶಸ್ವಿಯಾಗ ಬಹುದು.

Leave a Reply

Your email address will not be published. Required fields are marked *